
2026 ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ನಡುವೆ ಜ್ಯೋತಿಷ್ಯ ನಂಬುವವರು ತಮ್ಮ ರಾಶಿಯ ಮುಂದಿನ ವರ್ಷದ ಭವಿಷ್ಯ ಹೇಗಿರಲಿದೆ ಎಂಬುದನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಹಾಗಿದ್ದರೆ, ಮುಂದಿನ ವರ್ಷ ‘ತುಲಾ’ ರಾಶಿಯವರ ಭವಿಷ್ಯ ಹೇಗಿದೆ ಎಂಬುದನ್ನು ನೋಡೋಣ.
ಶನಿ ಷಷ್ಠಭಾವ (6ನೇ ಮನೆ) ಗುರು ಭಾಗ್ಯ–ಲಾಭ, ನವೆಂಬರ್ ರಾಹು–ಕೇತು ಸಂಚಾರದಿಂದ ಉದ್ಯೋಗ ಜಯ ಮತ್ತು ಆರ್ಥಿಕ ಏರಿಕೆಯಾಗಲಿದೆ.
2026ನೇ ಇಸವಿ ತುಲಾ ರಾಶಿಯವರಿಗೆ ಸ್ಪರ್ಧೆಗಳಲ್ಲಿ ಜಯ, ಉದ್ಯೋಗದಲ್ಲಿ ಸ್ಥಿರತೆ ಮತ್ತು ಆರ್ಥಿಕ ಸುಧಾರಣೆಯನ್ನು ತರುವ ಮಹತ್ವದ ವರ್ಷವಾಗಿದೆ. ಕರ್ನಾಟಕದ ಅಕ್ಷಾಂಶ–ರೇಖಾಂಶ ಆಧಾರಿತ ಗ್ರಹ ಸಂಚಾರಗಳನ್ನು ಪರಿಗಣಿಸಿದಾಗ, ಈ ವರ್ಷ ಶ್ರಮಕ್ಕೆ ಸ್ಫಷ್ಟ ಪ್ರತಿಫಲ ದೊರೆಯುವ ಯೋಗಗಳು ರೂಪುಗೊಳ್ಳುತ್ತವೆ.
ಶನಿ ಗ್ರಹ ಸಂಪೂರ್ಣ ವರ್ಷ ಮೀನ ರಾಶಿಯಲ್ಲಿ ಸಂಚರಿಸುವುದರಿಂದ, ತುಲಾ ಲಗ್ನಕ್ಕೆ ಇದು ಷಷ್ಠ ಭಾವ ಸಂಚಾರವಾಗಿರುತ್ತದೆ.
ಶನಿ ಷಷ್ಠಭಾವದಲ್ಲಿರುವುದರಿಂದ ಶತ್ರುಗಳ ಮೇಲೆ ಜಯ, ಸಾಲ ಪರಿಹಾರ, ನ್ಯಾಯಾಲಯದ ಪ್ರಕರಣಗಳಲ್ಲಿ ಅನುಕೂಲ ಹಾಗೂ ಉದ್ಯೋಗದಲ್ಲಿ ಎದುರಾಳಿಗಳನ್ನು ಮೀರಿಸುವ ಶಕ್ತಿ ದೊರೆಯುತ್ತದೆ. ದೀರ್ಘಕಾಲದಿಂದ ಇದ್ದ ಸಮಸ್ಯೆಗಳು ಕ್ರಮೇಣ ಪರಿಹಾರವಾಗುತ್ತವೆ. ಆದರೆ ಆರೋಗ್ಯದ ವಿಷಯದಲ್ಲಿ ಶಿಸ್ತು ಅಗತ್ಯ.
ಗುರು ಗ್ರಹ ಮೇ 30ರವರೆಗೆ ಮಿಥುನ ರಾಶಿಯಲ್ಲಿ ಇರುವುದರಿಂದ, ಇದು ನವಮ ಭಾವ (9ನೇ ಮನೆ) ಸಂಚಾರವಾಗಿರುತ್ತದೆ.
ಗುರು ಭಾಗ್ಯ ಭಾವದಲ್ಲಿರುವ ಕಾರಣ ಭಾಗ್ಯೋದಯ, ಉನ್ನತ ಶಿಕ್ಷಣ, ವಿದೇಶ ಪ್ರಯಾಣ, ಧಾರ್ಮಿಕ ಕಾರ್ಯಗಳು ಹಾಗೂ ಹಿರಿಯರ ಆಶೀರ್ವಾದದಿಂದ ಲಾಭ ಸಾಧ್ಯ. ಉದ್ಯೋಗ ಮತ್ತು ವ್ಯವಹಾರದಲ್ಲಿ ಹೊಸ ಅವಕಾಶಗಳು ದೊರೆಯುತ್ತವೆ.
ಮೇ 30 ನಂತರ ಗುರು ಕರ್ಕ ರಾಶಿಗೆ ಪ್ರವೇಶಿಸುವುದರಿಂದ, ಇದು ದಶಮ ಭಾವ.
ಗುರು ಕರ್ಮಭಾವದಲ್ಲಿರುವುದರಿಂದ ವೃತ್ತಿಯಲ್ಲಿ ಬಡ್ತಿ, ಗೌರವ, ಸಾಮಾಜಿಕ ಸ್ಥಾನಮಾನ ಮತ್ತು ಹೊಣೆಗಾರಿಕೆಗಳು ಹೆಚ್ಚಾಗುತ್ತವೆ. ಇದು ತುಲಾ ರಾಶಿಗೆ ವರ್ಷದ ಅತ್ಯಂತ ಫಲಪ್ರದ ಸಂಚಾರವಾಗಿದೆ.
ರಾಹು ನವೆಂಬರ್ ತನಕ ಕುಂಭ ರಾಶಿಯಲ್ಲಿ ಇರುವುದರಿಂದ, ತುಲಾ ರಾಶಿಗೆ ಇದು ಪಂಚಮ ಭಾವ.
ರಾಹು ಪಂಚಮ (5ನೇ ಮನೆ) ಭಾವದಲ್ಲಿರುವುದರಿಂದ ಸೃಜನಶೀಲತೆ, ಮಾಧ್ಯಮ, ತಂತ್ರಜ್ಞಾನ ಮತ್ತು ಇತರೆ ಕ್ಷೇತ್ರಗಳಲ್ಲಿ ಅವಕಾಶಗಳು ಹೆಚ್ಚಾಗುತ್ತವೆ. ಆದರೆ ಮಕ್ಕಳ ವಿಚಾರ ಮತ್ತು ಹೂಡಿಕೆಗಳಲ್ಲಿ ಅಪಾಯವಾಗಬಹುದು.
ನವೆಂಬರ್ ನಂತರ ರಾಹು ಮಕರ ರಾಶಿಗೆ ಪ್ರವೇಶಿಸುವುದರಿಂದ, ಇದು ಚತುರ್ಥ ಭಾವ (4ನೇ ಮನೆ) ಆಸ್ತಿ, ವಾಹನ ಮತ್ತು ತಾಯಿಯ ಆರೋಗ್ಯ ವಿಚಾರಗಳಲ್ಲಿ ಜಾಗ್ರತೆ ಅಗತ್ಯ.
ಅದೇ ಸಮಯದಲ್ಲಿ ಕೇತು ಸಿಂಹದಿಂದ ಕರ್ಕ ರಾಶಿಗೆ ಸಂಚರಿಸುವುದರಿಂದ, ಇದು ದಶಮ ಭಾವ (10 ನೇ ಮನೆ). ಕೇತು ಇಲ್ಲಿಗೆ ಬರುವುದರಿಂದ ಕೆಲಸದ ಮೇಲೆ ನಿರ್ಲಿಪ್ತತೆ, ಉದ್ಯೋಗ ಬದಲಾವಣೆ ಯೋಚನೆ ಅಥವಾ ವೃತ್ತಿಯಲ್ಲಿ ದಿಕ್ಕು ಬದಲಿಸುವ ಸಾಧ್ಯತೆ ಇದೆ.
ವಿವಾಹ ಮತ್ತು ದಾಂಪತ್ಯ ಜೀವನದಲ್ಲಿ ವರ್ಷ ಮಧ್ಯಭಾಗದ ನಂತರ ಸ್ಥಿರತೆ ಕಾಣಿಸುತ್ತದೆ.
ಆರೋಗ್ಯದ ದೃಷ್ಟಿಯಿಂದ ಕಿಡ್ನಿ, ಬೆನ್ನು ಮತ್ತು ರಕ್ತ ಸಂಚಾರಕ್ಕೆ ಗಮನ ಅಗತ್ಯ.
ಒಟ್ಟಾರೆ, 2026ನೇ ವರ್ಷ ತುಲಾ ರಾಶಿಯವರಿಗೆ ಶತ್ರು ನಿವಾರಣೆ, ವೃತ್ತಿಯಲ್ಲಿ ಏರಿಕೆ ಮತ್ತು ಸಮಾಜದಲ್ಲಿ ಗೌರವ ತರುವ ತಾಂತ್ರಿಕವಾಗಿ ಅತ್ಯಂತ ಮಹತ್ವದ ವರ್ಷವಾಗಿರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.