ADVERTISEMENT

ಐಟಿ ರಿಟರ್ನ್ಸ್ ಸಲ್ಲಿಸಲಿರುವ ಕೊನೆಯ ದಿನಾಂಕ ವಿಸ್ತರಣೆ: ಇದು ಸುಳ್ಳು ಸುದ್ದಿ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2019, 13:43 IST
Last Updated 30 ಆಗಸ್ಟ್ 2019, 13:43 IST
   

ಬೆಂಗಳೂರು: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲಿರುವ ಅವಧಿ ವಿಸ್ತರಿಸಿದ್ದು, ಕೊನೆಯ ದಿನಾಂಕ ಸಪ್ಟೆಂಬರ್ 30 ಎಂದು ಉಲ್ಲೇಖಿಸಿರುವ ನೋಟಿಸ್ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.ಈ ನೋಟಿಸ್ ನಕಲಿ ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮೂಲಕ ಸ್ಪಷ್ಟ ಪಡಿಸಿದೆ.

ಇಲ್ಲಿದೆ ಫೇಕ್ ನೋಟಿಸ್

ADVERTISEMENT


2019- 2020ರ ಆರ್ಥಿಕ ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲಿರುವ ಅವಧಿ ಜುಲೈ 31 ಆಗಿತ್ತು. ಇದನ್ನು ಒಂದು ತಿಂಗಳು ವಿಸ್ತರಣೆ ಮಾಡಿದ್ದು ರಿಟರ್ನ್ಸ್ ಸಲ್ಲಿಸಲಿರುವ ಕೊನೆಯ ದಿನಾಂಕ ಆಗಸ್ಟ್ 31 ಆಗಿದೆ. ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನಾಂಕಕ್ಕಿಂತ ಒಂದು ದಿನ ಮುಂಚೆ ಈ ರೀತಿ ಫೇಕ್ ನೋಟಿಸ್ ಹರಿದಾಡಿದ್ದು ಹಲವಾರು ಮಂದಿ ಇದು ನಿಜ ಎಂದು ನಂಬಿದ್ದಾರೆ.

ಸ್ಪಷ್ಟನೆ ನೀಡಿದ ಆದಾಯ ತೆರಿಗೆ ಇಲಾಖೆ

ಫೇಕ್ ನೋಟಿಸ್ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಆದಾಯ ತೆರಿಗೆ ಇಲಾಖೆ , ರಿಟರ್ನ್ಸ್ ಸಲ್ಲಿಸಲಿರುವ ದಿನಾಂಕ ವಿಸ್ತರಿಸಲಾಗಿದೆ ಎಂಬ ನೋಟಿಸ್ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆ ನೋಟಿಸ್ ನಿಜ ಅಲ್ಲ. ಆದಾಯ ತೆರಿಗೆ ಪಾವತಿದಾರರು 2019 ಆಗಸ್ಟ್ 31ರಂದು ರಿಟರ್ನ್ಸ್ ಸಲ್ಲಿಸಬೇಕುಎಂದು ಟ್ವೀಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.