ಮಂಗಳೂರು ದುರಂತ ಸೇರಿದಂತೆ ಪ್ರಮುಖ ವಿಮಾನ ಅಪಘಾತಗಳು
ನವದೆಹಲಿ: ಗುಜರಾತ್‌ನ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಟೇಕ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ.
ವಿಮಾನದಲ್ಲಿ 242 ಜನ ಪ್ರಯಾಣಿಕರಿದ್ದರು. ಇವರಲ್ಲಿ 169 ಜನ ಭಾರತೀಯ ಪ್ರಜೆಗಳು, 53 ಜನ ಬ್ರಿಟಿಷ್ ಪ್ರಜೆಗಳು, ಒಬ್ಬರು ಕೆನಡಾದವರು ಹಾಗೂ 7 ಮಂದಿ ಪೋರ್ಚುಗಲ್ ಪ್ರಜೆಗಳಿದ್ದರು ಎಂದು ಏರ್ ಇಂಡಿಯಾ ಸಂಸ್ಥೆ ಮಾಹಿತಿ ನೀಡಿದೆ.
ಭಾರತದಲ್ಲಿ ಈವರೆಗೆ ಸಂಭವಿಸಿದ ಪ್ರಮುಖ ವಿಮಾನ ಅಪಘಾತಗಳು
2020 ಆಗಸ್ಟ್ 7: ದುಬೈ–ಕೋಯಿಕ್ಕೋಡ್ ಮಾರ್ಗದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಕ್ಯಾಲಿಕಟ್‌ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ನಲ್ಲಿ ಪತನಗೊಂಡಿತ್ತು. ದುರಂತದಲ್ಲಿ 18 ಜನ ಮೃತಪಟ್ಟಿದ್ದು, 172 ಜನ ಪಾರಾಗಿದ್ದರು.
2010 ಮೇ 22: ದುಬೈ– ಮಂಗಳೂರು ಮಾರ್ಗದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ರನ್‌ವೇನಲ್ಲಿ ಪತನಗೊಂಡಿತ್ತು. ಘಟನೆಯಲ್ಲಿ 158 ಪ್ರಯಾಣಿಕರು ಮೃತಪಟ್ಟಿದ್ದು, ಕೇವಲ 8 ಜನ ಬದುಕುಳಿದಿದ್ದರು.
2000 ಜುಲೈ 17: ಪಟ್ನಾದ ವಸತಿ ಪ್ರದೇಶದಲ್ಲಿ ಅಲೈನ್ಸ್ ಏರ್ ವಿಮಾನ 7412 ಪತನವಾಗಿ 60 ಜನ ಮೃತಪಟ್ಟಿದ್ದರು.
1996 ನವೆಂಬರ್ 12: ಸೌದಿ ಅರೇಬಿಯಾದ ವಿಮಾನ ಮತ್ತು ಕಜಕಿಸ್ತಾನದ ವಿಮಾನ ಹರಿಯಾಣದ ಚಕ್ರಿಡಬ್ರಿ ಬಳಿ ಆಗಸದಲ್ಲಿ ಮುಖಾಮುಖಿ ಡಿಕ್ಕಿಯಾಗಿ ಎರಡೂ ವಿಮಾನದಲ್ಲಿದ್ದ 349 ಜನ ಸಾವಿಗೀಡಾಗಿದ್ದರು.
1993 ಏಪ್ರಿಲ್ 26: ಔರಂಗಾಬಾದ್‌ನಲ್ಲಿ ಟೇಕ್‌ಆಫ್ ಆಗುವಾಗ ರನ್‌ವೇನಲ್ಲಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದು ಇಂಡಿಯನ್ ಏರ್‌ಲೈನ್ಸ್ ವಿಮಾನ ಅಪಘಾತಕ್ಕೀಡಾಗಿತ್ತು. ಘಟನೆಯಲ್ಲಿ 55 ಜನ ಮೃತಪಟ್ಟಿದ್ದರು.
1991 ಆಗಸ್ಟ್ 16: ಇಂಫಾಲದಲ್ಲಿ ಇಂಡಿಯನ್ ಏರ್‌ಲೈನ್ಸ್ ವಿಮಾನ ಅಪಘಾತಕ್ಕೀಡಾಗಿ 69 ಜನ ಮೃತಪಟ್ಟಿದ್ದರು.
1990 ಫೆಬ್ರುವರಿ 14: ಪ್ರೇಮಿಗಳ ದಿನದಂದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಂಡಿಯನ್ ಏರ್‌ಲೈನ್ಸ್ ವಿಮಾನ ಅಪಘಾತಕ್ಕೀಡಾಗಿ 92 ಜನ ಸಾವನ್ನಪ್ಪಿದ್ದರು.
1988 ಅಕ್ಟೋಬರ್ 19: ಇಂಡಿಯನ್ ಏರ್‌ಲೈನ್ಸ್ ವಿಮಾನ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿ 133 ಜನ ಮೃತಪಟ್ಟಿದ್ದರು.
1982 ಜೂನ್ 21: ಬಾಂಬೆಯಲ್ಲಿ ಪ್ರತಿಕೂಲ ಹವಾಮಾನದ ಕಾರಣ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿ 17 ಜನ ಮೃತಪಟ್ಟಿದ್ದರು.
1978 ಜನವರಿ 1: ಏರ್ ಇಂಡಿಯಾ ವಿಮಾನ ಬಾಂದ್ರಾದ ಕರಾವಳಿ ಪ್ರದೇಶದಲ್ಲಿ ಅಪಘಾತಕ್ಕೀಡಾಗಿ ಹೊಸವರ್ಷದ ಸಂಭ್ರಮದಲ್ಲಿದ್ದ ಜನರಿಗೆ ಆಘಾತ ನೀಡಿತ್ತು. ಘಟನೆಯಲ್ಲಿ 213 ಜನ ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.