ADVERTISEMENT

Video| ರೈಲು ಹಳಿ ದಾಟುವ ಆನೆಗಳಿಗೆ AI ಸುರಕ್ಷತೆ: ತಮಿಳುನಾಡು ಅರಣ್ಯ ಇಲಾಖೆ ಕ್ರಮ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಆಗಸ್ಟ್ 2025, 6:47 IST
Last Updated 14 ಆಗಸ್ಟ್ 2025, 6:47 IST
<div class="paragraphs"><p>ರೈಲು ಹಳಿ ದಾಟುತ್ತಿರುವ ಆನೆಗಳು</p></div>

ರೈಲು ಹಳಿ ದಾಟುತ್ತಿರುವ ಆನೆಗಳು

   

ವಿಡಿಯೊದಲ್ಲಿನ ದೃಶ್ಯದ ಸ್ಕ್ರೀನ್ ಶಾಟ್‌

ಚೆನ್ನೈ: ರೈಲ್ವೆ ಹಳಿ ದಾಟುವ ಆನೆಗಳ ಸುರಕ್ಷತೆ ಖಾತ್ರಿಗೆ ಕೃತಕ ಬುದ್ಧಿಮತ್ತೆ (AI) ಆಧಾರಿತ ತಂತ್ರಜ್ಞಾನ ಬಳಸಿರುವ ತಮಿಳುನಾಡು ಅರಣ್ಯ ಇಲಾಖೆ ಈ ಕುರಿತ ವಿಡಿಯೊ ಬಿಡುಗಡೆ ಮಾಡಿದೆ.

ADVERTISEMENT

ಕೊಯಮತ್ತೂರಿನ ಮದುಕ್ಕರೈನಲ್ಲಿನ ರೈಲ್ವೆ ಹಳಿಯ ಮೇಲೆ ಮರಿಗಳೊಂದಿಗೆ ಹಳಿ ದಾಟುತ್ತಿರುವ ಆನೆ ಹಿಂಡಿನ ದೃಶ್ಯ ವಿಡಿಯೊದಲ್ಲಿದೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡ ಇಲಾಖೆ, ‘ಕೃತಕ ಬುದ್ಧಿಮತ್ತೆ ಆಧಾರಿತ ಮುನ್ನೆಚ್ಚರಿಕೆ ವ್ಯವಸ್ಥೆಯ ಮೂಲಕ 2023ರ ನವೆಂಬರ್‌ನಿಂದ ಈವರೆಗೆ ಯಾವೊಂದು ಆನೆಗಳ ಸಾವು ಸಂಭವಿಸಿಲ್ಲ. 12 ಟವರ್‌ಗಳು, 24 ಕ್ಯಾಮೆರಾ, 25 ಅರಣ್ಯ ಸಿಬ್ಬಂದಿ ಕಣ್ಗಾವಲಿನಲ್ಲಿ 6,592 ಆನೆಗಳು ಸುರಕ್ಷಿತವಾಗಿ ಹಳಿ ದಾಟಿವೆ’ ಎಂದು ಮಾಹಿತಿ ಹಂಚಿಕೊಂಡಿದೆ. ಮುಂದುವರಿದು, ‘ಪ್ರತಿಯೊಂದು ಆನೆಯೂ ಮುಖ್ಯ. ಬದ್ಧತೆಯ ಜತೆಗೆ ತಂತ್ರಜ್ಞಾನವೂ ಬೆಸೆದಾಗ ಏನನ್ನಾದರೂ ಸಾಧಿಸಲು ಸಾಧ್ಯ ಎಂದು ತಮಿಳುನಾಡು ಸಾಬೀತುಮಾಡಿದೆ’ ಎಂದು ಬರೆದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.