ADVERTISEMENT

ಬೆಂಗಳೂರಿಗೆ ಹೊರಟಿದ್ದ ವಿಮಾನದಲ್ಲಿ ದೋಷ: ಪುಣೆಯಲ್ಲಿ ಪ್ರಯಾಣಿಕರ ಇಳಿಸಿದ ಆಕಾಸಏರ್

ಪಿಟಿಐ
Published 13 ಜನವರಿ 2026, 6:12 IST
Last Updated 13 ಜನವರಿ 2026, 6:12 IST
<div class="paragraphs"><p>ಆಕಾಸ ಏರ್ ವಿಮಾನ</p></div>

ಆಕಾಸ ಏರ್ ವಿಮಾನ

   

ಮುಂಬೈ: ಹಾರಾಟಕ್ಕೆ ಅಣಿಯಾಗಿದ್ದ ಆಕಾಸಕ್ಕೆ ಸೇರಿದ ಬೋಯಿಂಗ್ 737 ಮ್ಯಾಕ್ಸ್‌ ವಿಮಾನದಲ್ಲಿ ಕೊನೆ ಕ್ಷಣದಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ಬೆಂಗಳೂರಿಗೆ ಹೊರಟಿದ್ದ ಪ್ರಯಾಣಿಕರನ್ನು ಪುಣೆಯಲ್ಲೇ ಇಳಿಸಲಾಗಿದೆ.

ಪುಣೆಯಿಂದ ಬೆಳಿಗ್ಗೆ 8.50ಕ್ಕೆ ವಿಮಾನ ಹೊರಡಬೇಕಿತ್ತು. 8.10ಕ್ಕೆ ಬೋರ್ಡಿಂಗ್ ಕೂಡಾ ಆರಂಭವಾಯಿತು. ಹಾರಾಟಕ್ಕೆ ಅಂತಿಮ ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ ದೋಷ ಕಾಣಿಸಿಕೊಂಡಿತು. ತಕ್ಷಣ ಹಾರಾಟವನ್ನು ರದ್ದುಪಡಿಸಿದ ವಿಮಾನಯಾನ ಸಂಸ್ಥೆ, ಪ್ರಯಾಣಿಕರನ್ನು ಕೆಳಕ್ಕಿಳಿಸಿತು ಎಂದು ಮೂಲಗಳು ಹೇಳಿವೆ.

ADVERTISEMENT

‘ಬೆಂಗಳೂರು ಮೂಲದ ಆಕಾಸ ಏರ್ ವಿಮಾನ (QP1312) ಜ. 13ರಂದು ಪುಣೆ ವಿಮಾನ ನಿಲ್ದಾಣದಿಂದ ಪ್ರಯಾಣಿಸಬೇಕಿತ್ತು. ಪ್ರಯಾಣಿಕರು ವಿಮಾನದಲ್ಲಿ ಆಸೀನರಾಗಿದ್ದರು. ವಿಮಾನ ಹೊರಡಲು ಅಣಿಯಾಗುತ್ತಿದ್ದಾಗ, ತಾಂತ್ರಿಕ ದೋಷ ಕಂಡುಬಂತು. ಹೀಗಾಗಿ ಕೊನೆ ನಿಮಿಷದಲ್ಲಿ ಹಾರಾಟವನ್ನು ರದ್ದುಪಡಿಸಲಾಗಿದೆ. ನಂತರ ಪ್ರಯಾಣಿಕರನ್ನು ಕೆಳಕ್ಕೆ ಇಳಿಸಲಾಯಿತು’ ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.

ಪರಿಷ್ಕೃತ ನಿರ್ಗಮನ ವೇಳಾಪಟ್ಟಿ ಈವರೆಗೂ ಘೋಷಿಸಿಲ್ಲ ಎಂದು ನಿಲ್ದಾಣದಲ್ಲಿರುವ ಪ್ರಯಾಣಿಕರು ತಿಳಿಸಿದ್ದಾರೆ. ಪ್ರತಿಕ್ರಿಯೆಗೆ ಆಕಾಸ ಏರ್‌ನ ವಕ್ತಾರರು ಲಭ್ಯವಾಗಿಲ್ಲ ಎಂದು ಪಿಟಿಐ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.