ADVERTISEMENT

ಅಸ್ಸಾಂ | 11ನೇ ತರಗತಿ ಪ್ರಶ್ನೆಪತ್ರಿಕೆ ಸೋರಿಕೆ: ಪರೀಕ್ಷೆ ರದ್ದು

ಶಿಕ್ಷಣ ಸಚಿವರ ರಾಜೀನಾಮೆಗೆ ವಿದ್ಯಾರ್ಥಿ ಸಂಘಟನೆಗಳಿಂದ ಒತ್ತಾಯ

ಪಿಟಿಐ
Published 23 ಮಾರ್ಚ್ 2025, 13:25 IST
Last Updated 23 ಮಾರ್ಚ್ 2025, 13:25 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಗುವಾಹಟಿ: ಅಸ್ಸಾಂನ ವಿವಿಧೆಡೆ 11ನೇ ತರಗತಿ ಬೋರ್ಡ್‌ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಸೋರಿಕೆಯಾದ ಬಗ್ಗೆ ವರದಿಯಾದ ಬೆನ್ನಲ್ಲೇ, ಮಾರ್ಚ್‌ 24ರಿಂದ 29ರವರೆಗೆ ನಡೆಯಬೇಕಿದ್ದ ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ ಎಂದು ಶಿಕ್ಷಣ ಸಚಿವ ರನೋಜ್‌ ಪೆಗು ತಿಳಿಸಿದರು.

ಪರೀಕ್ಷೆ ನಿಗದಿಯಾದ ಒಂದು ದಿನ ಮುಂಚೆಯೇ ಮೂರು ಸರ್ಕಾರಿ ಶಾಲೆಗಳು ಸೇರಿದಂತೆ 18 ಶಾಲೆಗಳು ಗಣಿತ ಪ್ರಶ್ನೆಪತ್ರಿಕೆಯ ‘ಸೀಲ್‌’ ಅನ್ನು ತೆಗೆದಿವೆ. ಹೀಗಾಗಿ 15 ಖಾಸಗಿ ಶಾಲೆಗಳ ಮಾನ್ಯತೆಯನ್ನು ಅಮಾನತು ಮಾಡಲಾಗಿದೆ. ನಿಯಮ ಉಲ್ಲಂಘಿಸಿದ ಸರ್ಕಾರಿ ಶಾಲೆಗಳ ವಿರುದ್ಧವೂ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಪೆಗು ತಿಳಿಸಿದರು.

ADVERTISEMENT

ಈ ಸಂಬಂಧ ದೂರುಗಳು ದಾಖಲಾಗಿವೆ. 2025–26ನೇ ಸಾಲಿನಲ್ಲಿ 11 ತರಗತಿಗೆ ಮಕ್ಕಳನ್ನು ದಾಖಲು ಮಾಡಿಕೊಳ್ಳದಂತೆ ಈ ಶಾಲೆಗಳಿಗೆ ನಿರ್ಬಂಧ ಹೇರಲಾಗಿದೆ ಎಂದು ಹೇಳಿದರು.

ಹೊಸ ವೇಳಾಪಟ್ಟಿ ಬಗ್ಗೆ ಸೋಮವಾರ ನಡೆಯಲಿರುವ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.