ADVERTISEMENT

ಚುನಾವಣೆ: ಬೆಳಿಗ್ಗೆ 11ರವರೆಗೆ ಅಸ್ಸಾಂನಲ್ಲಿ ಶೇ27, ಬಂಗಾಳದಲ್ಲಿ ಶೇ 37 ಮತದಾನ

ಪಿಟಿಐ
Published 1 ಏಪ್ರಿಲ್ 2021, 6:57 IST
Last Updated 1 ಏಪ್ರಿಲ್ 2021, 6:57 IST
ಅಸ್ಸಾಂನ  ನಾಗೋನ್‌ ಜಿಲ್ಲೆಯ ಮತಗಟ್ಟೆಯೊಂದರ ಎದುರು ಮತ ಚಲಾಯಿಸಲು ಸರತಿಯಲ್ಲಿ ನಿಂತಿರುವ ಮತದಾರರು
ಅಸ್ಸಾಂನ  ನಾಗೋನ್‌ ಜಿಲ್ಲೆಯ ಮತಗಟ್ಟೆಯೊಂದರ ಎದುರು ಮತ ಚಲಾಯಿಸಲು ಸರತಿಯಲ್ಲಿ ನಿಂತಿರುವ ಮತದಾರರು   

ಗುವಾಹಟಿ/ಕೋಲ್ಕತ್ತಾ: ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಗುರುವಾರ ನಡೆಯುತ್ತಿರುವ ಎರಡನೇ ಹಂತದ ಚುನಾವಣೆಯಲ್ಲಿ ಮತದಾನ ಬಿರುಸಿನಿಂದ ಸಾಗಿದೆ.

ಅಸ್ಸಾಂನಲ್ಲಿ 39 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಿಗ್ಗೆ 11 ಗಂಟೆ ವೇಳೆಗೆ ಶೇ 27.45ರಷ್ಟು ಮತದಾನವಾಗಿತ್ತು. ಪಶ್ಚಿಮ ಬಂಗಾಳದಲ್ಲಿ 30 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಿಗ್ಗೆ 11ರ ವೇಳೆಗೆ ಶೇ 37.42 ಮತದಾನವಾಗಿತ್ತು.

ಬಹುತೇಕ ಶಾಂತಿಯುತವಾಗಿಯೇ ಮತದಾನ ನಡೆಯುತ್ತಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.