ADVERTISEMENT

ಸಾಮಾಜಿಕ ಮಾಧ್ಯಮಗಳಲ್ಲಿ ಬಿಜೆಪಿಯ 'ಇ-ರಾವಣ'ರ ಬಗ್ಗೆ ಎಚ್ಚರವಹಿಸಿ: ಅಖಿಲೇಶ್

ಪಿಟಿಐ
Published 18 ಸೆಪ್ಟೆಂಬರ್ 2021, 1:02 IST
Last Updated 18 ಸೆಪ್ಟೆಂಬರ್ 2021, 1:02 IST
ಅಖಿಲೇಶ್ ಯಾದವ್
ಅಖಿಲೇಶ್ ಯಾದವ್   

ಲಖನೌ: ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡುವ ಬಿಜೆಪಿಯ 'ಇ-ರಾವಣ'ರ ಬಗ್ಗೆ ಎಚ್ಚರವಹಿಸಿ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ.

ವಿಶ್ವಕರ್ಮ ಜಯಂತಿ ಆಚರಣೆಯ ಸಂದರ್ಭದಲ್ಲಿ ಸಮಾಜವಾದಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

'ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸುಳ್ಳು ಸುದ್ದಿಗಳನ್ನು ಹರಡಲಿದೆ. ತರಬೇತಿ ಹಾಗೂ ಹಣ ಪಡೆದ ಇ-ರಾವಣರು ಸಮಾಜಿಕ ಮಾಧ್ಯಮದಲ್ಲಿ ಕುಳಿತುಕೊಂಡು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ. ಹಾಗಾಗಿ ನಾವು ಜಾಗರೂಕರಾಗಿರಬೇಕು' ಎಂದು ಹೇಳಿದ್ದಾರೆ.

'ಉತ್ತರ ಪ್ರದೇಶದಲ್ಲಿ ಮುಂಬರುವ ಚುನಾವಣೆಯು ದೇಶದಲ್ಲಿ ಅತಿದೊಡ್ಡದಾಗಿದ್ದು, ಪ್ರಜಾಪ್ರಭುತ್ವದ ಪರೀಕ್ಷೆಯಾಗಲಿದೆ. ಬಿಜೆಪಿಯು ಸುಳ್ಳು ಹಾಗೂ ಗೊಂದಲಗಳನ್ನು ಹರಡುವ ಪಕ್ಷವಾಗಿದ್ದು, ಪಿತೂರಿಗಳನ್ನು ರೂಪಿಸಲಿದೆ. ಹಾಗಾಗಿ ಎಲ್ಲರೂ ಎಚ್ಚರವಹಿಸಬೇಕು' ಎಂದು ಹೇಳಿದ್ದಾರೆ.

ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯವನ್ನು ಅಖಿಲೇಶ್ ಯಾದವ್ ಟೀಕಿಸಿದರು. ಬಸ್, ರೈಲು ರದ್ದುಗೊಳಿಸಿ ಕಾರ್ಮಿಕರು ಬರಿಗಾಲಲ್ಲಿ ನಡೆದುಕೊಂಡು ಊರುಗಳಿಗೆ ತೆರಳುವಂತೆ ಮಾಡಿದರು. ಮೃತದೇಹಗಳು ಗಂಗಾ ನದಿಯಲ್ಲಿ ಪತ್ತೆಯಾದವು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.