ADVERTISEMENT

ಎ.ಐ ಕಂಟೆಂಟ್‌ಗಳ ನಿಯಂತ್ರಣಕ್ಕೆ ಕೇಂದ್ರದಿಂದ ಕಠಿಣ ಕಾನೂನು: ಫೆ. 20ರಿಂದಲೇ ಜಾರಿ

ಪಿಟಿಐ
Published 10 ಫೆಬ್ರುವರಿ 2026, 13:31 IST
Last Updated 10 ಫೆಬ್ರುವರಿ 2026, 13:31 IST
<div class="paragraphs"><p>ಎ.ಐ</p></div>

ಎ.ಐ

   

– ಗೆಟ್ಟಿ ಚಿತ್ರ

ನವದೆಹಲಿ: ಆನ್‌ಲೈನ್‌ ವೇದಿಕೆಗಳಲ್ಲಿ ಡೀಪ್‌ ಫೇಕ್‌ ಹಾಗೂ ಕೃತಕ ಬುದ್ದಿಮತ್ತೆ (ಎ.ಐ) ಮೂಲಕ ಸೃಜಿಸಿದ ವಿಷಯವಸ್ತು (ಕಂಟೆಂಟ್) ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮಂಗಳವಾರ ಕಠಿಣ ಆದೇಶ ಹೊರಡಿಸಿದ್ದು, ಯಾವುದೇ ಪ್ರಾಧಿಕಾರ ಅಥವಾ ಕೋರ್ಟ್ ಸೂಚಿಸಿದ ಮೂರು ಗಂಟೆಯೊಳಗೆ ಅಂತಹ ಪೋಸ್ಟ್‌ಗಳನ್ನು ತೆಗೆದುಹಾಕಬೇಕು ಎಂದಿದೆ.

ADVERTISEMENT

ಇದಕ್ಕಾಗಿ 2021ರ ಐಟಿ ಕಾಯ್ದೆಗೆ ಸರ್ಕಾರ ತಿದ್ದುಪಡಿ ತರಲಾಗಿದ್ದು, ಫೆ. 20ರಿಂದಲೇ ಜಾರಿಗೆ ಬರಲಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೊರಡಿಸಿದ ಗೆಜೆಟ್ ಅಧಿಸೂಚನೆಯ ಪ್ರಕಾರ, ಸಾಮಾಜಿಕ ಜಾಲತಾಣ ವೇದಿಕೆಗಳು ಸರ್ಕಾರ ಅಥವಾ ನ್ಯಾಯಾಲಯ ಆದೇಶ ಮಾಡಿದ 3 ಗಂಟೆಯೊಳಗೆ ಅಂತಹ ಪೋಸ್ಟ್‌ಗಳನ್ನು ತೆಗೆದುಹಾಕಬೇಕು. ಈ ಹಿಂದೆ ಈ ಮಿತಿ 36 ಗಂಟೆ ಇತ್ತು.

ಎ.ಐ ರಚಿತ ವಿಷಯಗಳಿಗೆ ಕಡ್ಡಾಯವಾಗಿ ಲೇಬಲಿಂಗ್ (ಎ.ಐ ಮೂಲಕ ರಚಿಸಿದ ಎಂದು ನಮೂದಿಸಬೇಕು) ಮಾಡಬೇಕು. ಕೃತಕವಾಗಿ ರಚಿಸಲಾದ ವಿಷಯಗಳನ್ನು ಹಂಚುವಾಗಲೂ ಲೇಬಲ್ ಮಾಡಬೇಕು ಎಂದು ನಿಯಮದಲ್ಲಿ ಹೇಳಲಾಗಿದೆ.

ಎ.ಐ ಮೂಲಕ ರಚಿಸಲಾದ ಕಾನೂನುಬಾಹಿರ, ಮೋಸ, ಲೈಂಗಿಕ ಶೋಷಣೆಯ, ಒಪ್ಪಿಗೆಯಿಲ್ಲದ ಅಥವಾ ಸುಳ್ಳು ದಾಖಲೆಗಳು, ಮಕ್ಕಳ ಮೇಲಿನ ದೌರ್ಜನ್ಯ, ಸ್ಫೋಟಕ ಮುಂತಾದ ವಿಷಯವನ್ನು ತಡೆಯಲು ಪ್ಲಾಟ್‌ಫಾರ್ಮ್‌ಗಳು ಸ್ವಯಂಚಾಲಿತ ಸಾಧನಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.