ರಾಯ್‌ಪುರ/ಕೊಂಡಗಾವ್: ಛತ್ತೀಸಗಢದ ನಕ್ಸಲ್ ಪೀಡಿತ ಕೊಂಡಗಾವ್ ಜಿಲ್ಲೆಯ ಸಣ್ಣ ಗ್ರಾಮದ ಜುಡೊ ಆಟಗಾರ್ತಿ ಯೋಗಿತಾ ಮಂಡಾವಿ (17) ಅವರು ಬಾಲ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಸಾಮಾಜಿಕ ಸವಾಲುಗಳು ಮತ್ತು ಕೌಟುಂಬಿಕ ಸಂಕಷ್ಟದ ನಡುವೆಯೂ ಯೋಗಿತಾ ಅವರು ರಾಷ್ಟ್ರಮಟ್ಟದ ಜುಡೊ ಸ್ಪರ್ಧೆಗಳಲ್ಲಿ ಅಪ್ರತಿಮೆ ಸಾಧನೆ ತೋರಿದ್ದಾರೆ. ಯೋಗಿತಾ ನಾಲ್ಕು ವರ್ಷದವರಿದ್ದಾಗಲೇ ತಂದೆ ಮತ್ತು ತಾಯಿಯನ್ನು ಕಳೆದುಕೊಂಡರು.
ಅನಂತರ ಚಿಕ್ಕಪ್ಪ ಮತ್ತು ಚಿಕ್ಕಮ್ಮನ ನೆರಳಲ್ಲಿ ಬದುಕಿದರು. 10ನೇ ವಯಸ್ಸಿನಲ್ಲಿ ಜೊಡೊ ತರಬೇತಿ ಪಡೆದು ತಮ್ಮ ಪ್ರತಿಭೆಯನ್ನು ಅನಾವರಣ ಮಾಡಿದರು. ಒಂದೇ ವರ್ಷದ ಒಳಗಾಗಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪದಕವನ್ನು ಗಳಿಸಿದರು. ಬಳಿಕ ವಿವಿಧ ಸ್ಪರ್ಧೆಗಳಲ್ಲಿ ಚಿನ್ನ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.