ADVERTISEMENT

ದೇಶದಲ್ಲಿರುವ 6 ವರ್ಷದ ಶೇ 37ರಷ್ಟು ಮಕ್ಕಳಲ್ಲಿ ಅಪೌಷ್ಟಿಕತೆ: ಸರ್ಕಾರದ ದಾಖಲೆ

ಪಿಟಿಐ
Published 23 ಜುಲೈ 2025, 12:30 IST
Last Updated 23 ಜುಲೈ 2025, 12:30 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ಪೋಷಣ್‌ ಟ್ರ್ಯಾಕರ್‌ನಲ್ಲಿ ನೋಂದಾಯಿಸಲಾದ 6 ವರ್ಷದೊಳಗಿನ ಮಕ್ಕಳಲ್ಲಿ ಶೇ 37.07ರಷ್ಟು ಮಕ್ಕಳ ಬೆಳವಣಿಗೆ ಕುಂಠಿತಗೊಂಡಿದ್ದು, ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಸರ್ಕಾರದ ಅಧಿಕೃತ ದಾಖಲೆ ಹೇಳಿದೆ.

ಶೇ 15.93ರಷ್ಟು ಮಕ್ಕಳು ಅಗತ್ಯಕ್ಕಿಂತ ಕಡಿಮೆ ತೂಕ ಹೊಂದಿದ್ದಾರೆ ಹಾಗೂ ಶೇ 5.46ರಷ್ಟು ಮಕ್ಕಳು ಸಪೂರ ದೇಹ ಹೊಂದಿದ್ದಾರೆ ಎಂದೆನ್ನಲಾಗಿದೆ.

ADVERTISEMENT

ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಜ್ಯ ಖಾತೆ ಸಚಿವೆ ಸಾವಿತ್ರಿ ಠಾಕೂರ್ ಅವರು ರಾಜ್ಯಸಭೆಗೆ ಈ ಕುರಿತು ಮಾಹಿತಿ ನೀಡಿ, ‘ಕಡಿಮೆ ತೂಕದ ಮಕ್ಕಳ ಸಂಖ್ಯೆ ಉತ್ತರ ಪ್ರದೇಶದಲ್ಲಿ (ಶೇ 48.83ರಷ್ಟು) ಹೆಚ್ಚಾಗಿ ಕಂಡುಬಂದಿದೆ.  ನಂತರದ ಸ್ಥಾನಗಳಲ್ಲಿ ಜಾರ್ಖಂಡ್‌ (ಶೇ 43.26ರಷ್ಟು), ಬಿಹಾರದಲ್ಲಿ ಶೇ 42.68ರಷ್ಟು ಮತ್ತು ಮಧ್ಯಪ್ರದೇಶದಲ್ಲಿ ಶೇ 42.09ರಷ್ಟು ಮಕ್ಕಳು ಕಡಿಮೆ ತೂಕ ಹೊಂದಿರುವುದು ತಿಳಿದುಬಂದಿದೆ ಎಂದು ಹೇಳಿದ್ದಾರೆ.

ಕಳೆದ ಜೂನ್‌ವರೆಗೂ ‘ಪೋಷಣ್‌’ನಲ್ಲಿ 6 ವರ್ಷದೊಳಗಿನ 8.61 ಕೋಟಿ ಮಕ್ಕಳು ತಮ್ಮ ಹೆಸರು ದಾಖಲಿಸಿಕೊಂಡಿದ್ದಾರೆ. ಕಳೆದ ವರ್ಷ ದಾಖಲಾದವರ ಸಂಖ್ಯೆ 8.91 ಕೋಟಿ ಇತ್ತು.

‘ಸಕ್ಷಮ ಅಂಗನವಾಡಿ’ ಕಾರ್ಯಕ್ರಮದ ಅಡಿಯಲ್ಲಿ ದೇಶದ 2 ಲಕ್ಷ ಅಂಗನವಾಡಿ ಕೇಂದ್ರಗಳಲ್ಲಿ ಅತ್ಯಾಧುನಿಕ ಮೂಲಸೌಕರ್ಯ ಮತ್ತು ಡಿಜಿಟಲ್ ಕಲಿಕಾ ಸಾಧನಗಳ ಸಹಿತ ಮೇಲ್ದರ್ಜೆಗೆ ಏರಿಸಲಾಗಿದೆ. 20 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಾಕಿ ಉಳಿದಿರುವ 88,716 ಮಿನಿ ಅಂಗನವಾಡಿಗಳ ಮೇಲ್ದರ್ಜೆಗೆ ಸರ್ಕಾರದ ಅನುಮತಿ ದೊರೆತಿದೆ’ ಎಂದು ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.