ADVERTISEMENT

ಸಚಿನ್‌ ತೆಂಡೂಲ್ಕರ್‌ ಡೀಪ್‌ಫೇಕ್‌ ವಿಡಿಯೊ: ಆತಂಕ ವ್ಯಕ್ತಪಡಿಸಿದ ಕ್ರಿಕೆಟ್‌ ತಾರೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜನವರಿ 2024, 9:24 IST
Last Updated 15 ಜನವರಿ 2024, 9:24 IST
<div class="paragraphs"><p>ಸಚಿನ್‌ ತೆಂಡೂಲ್ಕರ್‌</p></div>

ಸಚಿನ್‌ ತೆಂಡೂಲ್ಕರ್‌

   

ಪಿಟಿಐ ಚಿತ್ರ

ನವದೆಹಲಿ: ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಅವರ ಡೀಪ್‌ಫೇಕ್‌ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಸಚಿನ್‌ ಕಳವಳ ವ್ಯಕ್ತಪಡಿಸಿದ್ದಾರೆ.

ADVERTISEMENT

ಆನ್‌ಲೈನ್‌ ಗೇಮಿಂಗ್‌ ಆ‍್ಯಪ್‌ವೊಂದನ್ನು ಸಚಿನ್‌ ಅವರು ಪ್ರಚಾರ ಮಾಡುತ್ತಿರುವ ವಿಡಿಯೊವನ್ನು ಡೀಪ್‌ಫೇಕ್‌ ಮಾಡಿ ಹರಿಬಿಡಲಾಗಿದೆ.

ವಿಡಿಯೊವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಸಚಿನ್‌ ಅವರು, ‘ಈ ವಿಡಿಯೊ ನಕಲಿ. ತಂತ್ರಜ್ಞಾನದ ದುರ್ಬಳಕೆಯಾಗುತ್ತಿರುವುದನ್ನು ನೋಡಿದರೆ ಬೇಸರವಾಗುತ್ತದೆ. ಈ ರೀತಿಯ ವಿಡಿಯೊಗಳು, ಜಾಹೀರಾತುಗಳು ಮತ್ತು ಅಪ್ಲಿಕೇಶನ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ರಿಪೋರ್ಟ್‌ ಮಾಡಲು ಎಲ್ಲರಿಗೂ ವಿನಂತಿಸಿ. ಸಾಮಾಜಿಕ ಮಾಧ್ಯಮ ವೇದಿಕೆಗಳು ಎಚ್ಚರಿಕೆ ಮತ್ತು ದೂರುಗಳಿಗೆ ಸ್ಪಂದಿಸುವ ಅಗತ್ಯವಿದೆ. ತಪ್ಪು ಮಾಹಿತಿ ಮತ್ತು ಡೀಪ್‌ಫೇಕ್‌ಗಳ ಹರಡುವಿಕೆಯನ್ನು ನಿಲ್ಲಿಸಲು ತ್ವರಿತ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ’ ಎಂದು ಬರೆದುಕೊಂಡಿದ್ದಾರೆ.

ಕೆಲವು ತಿಂಗಳ ಹಿಂದೆ ನಟಿ ರಶ್ಮಿಕಾ ಮಂದಣ್ಣ ಸೇರಿದಂತೆ ಹಲವು ಉದ್ಯಮಿಗಳು ಹಾಗೂ ಸಿನಿ ತಾರೆಯರ ಡೀಪ್‌ಫೇಕ್‌ ವಿಡಿಯೊ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.