ನವದೆಹಲಿ: ನವದೆಹಲಿಯಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಯಮುನಾ ನದಿಯ ಸ್ವಚ್ಛತೆ ಸೇರಿದಂತೆ ವಿವಿಧ ಭರವಸೆಗಳುಳ್ಳ ಪ್ರಣಾಳಿಕೆಯನ್ನು ಬಿಜೆಪಿ ಶನಿವಾರ ಬಿಡುಗಡೆ ಮಾಡಿತು.
ದೆಹಲಿಯಲ್ಲಿರುವ 1,700 ಅನಧಿಕೃತ ಕಾಲೊನಿಗಳ ನಿವಾಸಿಗಳಿಗೆ ಮಾಲೀಕತ್ವದ ಪೂರ್ಣ ಹಕ್ಕು ನೀಡುವುದು, ಗಿಗ್ ನೌಕರರ ಏಳಿಗೆಗಾಗಿ ಕಲ್ಯಾಣ ಮಂಡಳಿ ರಚನೆ, ವಿಮಾ ಭದ್ರತೆ ಭರವಸೆಗಳು ಸೇರಿವೆ.
ಬಿಜೆಪಿ ‘ಸಂಕಲ್ಪ ಪತ್ರ’ದ ಅಂತಿಮ ಭಾಗವನ್ನು ಹಿರಿಯ ಮುಖಂಡ ಅಮಿತ್ ಶಾ ಬಿಡುಗಡೆ ಮಾಡಿದರು.
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನೀಡಿರುವ ಇತರೆ ಭರವಸೆಗಳು...
* ವಿದ್ಯಾರ್ಥಿಗಳಿಗೆ ವಾರ್ಷಿಕ ₹4,000 ಮೊತ್ತದವರೆಗೂ ದೆಹಲಿ ಮೆಟ್ರೊದಲ್ಲಿ ಉಚಿತವಾಗಿ ಪ್ರಯಾಣಿಸುವ ಅವಕಾಶ
* ಗಿಗ್ ನೌಕರರ ಏಳಿಗೆಗಾಗಿ ಕಲ್ಯಾಣ ಮಂಡಳಿ ರಚನೆ. ₹10 ಲಕ್ಷ ಮೌಲ್ಯದ ವಿಮಾ ಭದ್ರತೆ, ₹5 ಲಕ್ಷದವರೆಗೆ ಅಪಘಾತ ವಿಮೆ ಸೌಲಭ್ಯ
* ಪಾರದರ್ಶಕ ಕ್ರಮದಲ್ಲಿ 50 ಸಾವಿರ ಉದ್ಯೋಗ ಭರ್ತಿ. 20 ಲಕ್ಷ ಮಂದಿ ಸ್ವ ಉದ್ಯೋಗ ಅವಕಾಶ ಕಲ್ಪಿಸಲು ಗ್ರಾಂಡ್ ಮಹಾಭಾರತ್ ಕಾರಿಡಾರ್ ರಚನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.