ADVERTISEMENT

Delhi Pollution: ವೈದ್ಯಕೀಯ ಸಲಕರಣೆಯಾಗಿ ಏರ್ ಪ್ಯೂರಿಫೈಯರ್ ಪರಿಗಣಿಸಲು ಪಿಐಎಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಡಿಸೆಂಬರ್ 2025, 6:25 IST
Last Updated 24 ಡಿಸೆಂಬರ್ 2025, 6:25 IST
<div class="paragraphs"><p>ಏರ್ ಪ್ಯೂರಿಫೈಯರ್</p></div>

ಏರ್ ಪ್ಯೂರಿಫೈಯರ್

   

(ಪ್ರಾತಿನಿಧಿಕ ಚಿತ್ರ)

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಾಯು ಶುದ್ಧೀಕರಣ ಪರಿಕರವನ್ನು (ಏರ್ ಪ್ಯೂರಿಫೈಯರ್) ಅನ್ನು 'ವೈದ್ಯಕೀಯ ಸಲಕರಣೆ' ಆಗಿ ಪರಿಗಣಿಸಲು ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆಯಾಗಿದೆ.

ADVERTISEMENT

ದೆಹಲಿ-ಎನ್‌ಸಿಆರ್‌ನಲ್ಲಿ ವಾಯು ಮಾಲಿನ್ಯದಿಂದ ಜನರು ತೀವ್ರ ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಈ ತುರ್ತು ಪರಿಸ್ಥಿತಿ ಎದುರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ವಿನಂತಿ ಮಾಡಲಾಗಿದೆ.

ವಕೀಲ ಕಪಿಲ್ ಮದನ್ ಎಂಬವರು ಅರ್ಜಿ ಸಲ್ಲಿಸಿದ್ದು, ವಾಯು ಶುದ್ಧೀಕರಣ ಪರಿಕರ ಮೇಲಿನ ಜಿಎಸ್‌ಟಿಯನ್ನು ಶೇ 18ರಿಂದ ಶೇ 5ಕ್ಕೆ ಇಳಿಸುವಂತೆಯೂ ಮನವಿ ಮಾಡಲಾಗಿದೆ.

ಜನರಿಗೆ ಅತಿ ಅಗತ್ಯ ಎನಿಸಿರುವ ಏರ್ ಫ್ಯೂರಿಫೈಯರ್‌ಗಳ ಮೇಲೆ ಶೇ 18ರಷ್ಟು ಜಿಎಸ್‌ಟಿ ವಿಧಿಸುವುದು ಕಾನೂನುಬಾಹಿರ ಎಂದು ಉಲ್ಲೇಖಿಸಲಾಗಿದೆ.

ವೈದ್ಯಕೀಯ ಸಲಕರಣೆಗಳ ಮೇಲೆ ಶೇ 5ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಈ ವಿಭಾಗದ ಅಡಿಯಲ್ಲಿ ಏರ್ ಫ್ಯೂರಿಫೈಯರ್ ಪರಿಗಣಿಸುವಂತೆ ವಿನಂತಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.