ADVERTISEMENT

ಎಎಪಿಯ ಪೊರಕೆಯಿಂದ ಬಿಜೆಪಿ ಸ್ವಚ್ಛವಾಗಿ ಗುಡಿಸಿಹೋಗಲಿದೆ: ಅಖಿಲೇಶ್ ಯಾದವ್

ಪಿಟಿಐ
Published 30 ಜನವರಿ 2025, 13:35 IST
Last Updated 30 ಜನವರಿ 2025, 13:35 IST
<div class="paragraphs"><p> ಅಖಿಲೇಶ್ ಯಾದವ್</p></div>

ಅಖಿಲೇಶ್ ಯಾದವ್

   

ಪಿಟಿಐ ಚಿತ್ರ

ನವದೆಹಲಿ: ‘ನಿಮ್ಮ ಮತವನ್ನೂ ವ್ಯರ್ಥಗೊಳಿಸದೆ ಆಮ್ ಆದ್ಮಿ ಪಕ್ಷಕ್ಕೆ ಹಾಕಿ, ಬಿಜೆಪಿಯನ್ನು ಸೋಲಿಸಿ’ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಅವರು ದೆಹಲಿ ಜನತೆಗೆ ಹೇಳಿದ್ದಾರೆ.

ADVERTISEMENT

ದೆಹಲಿಯಲ್ಲಿ ಗುರುವಾರ ಅರವಿಂದ ಕೇಜ್ರಿವಾಲ್‌ರೊಂದಿಗೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ಅಖಿಲೇಶ್‌ ಯಾದವ್‌, ‘ಎಎಪಿಯ ಪೊರಕೆಯಿಂದ ಬಿಜೆಪಿ ಸ್ವಚ್ಛವಾಗಿ ಗುಡಿಸಿಹೋಗಲಿದೆ’ ಎಂದರು.

‘ಎಲ್ಲರೂ ಸೇರಿ ಬಿಜೆಪಿಯನ್ನು ಸೋಲಿಸೋಣ, ನಿಮ್ಮ ಮತಗಳು ವ್ಯರ್ಥವಾಗಬಾರದು, ಬಿಜೆಪಿಯನ್ನು ಸೋಲಿಸಲು ಪ್ರತಿಯೊಂದು ಮತವನ್ನೂ ಎಎಪಿಗೆ ಹಾಕಿ ಎಂದು ಮನವಿ ಮಾಡಿಕೊಳ್ಳುತ್ತೇನೆ. ನೀವು ಈಗಿರುವ ಯೋಜನೆಗಳನ್ನು ಕಳೆದುಕೊಳ್ಳಲು ಇಚ್ಚಿಸುತ್ತೀರಾ?, ಬಿಜೆಪಿಯವರು ಕೂಡ ಎಎಪಿ ಯೋಜನೆಗಳನ್ನು ಸ್ಥಗಿತಗೊಳಿಸುವುದಿಲ್ಲ ಎನ್ನುತ್ತಾರೆ, ಅದರರ್ಥ, ಅವರೂ ನಮ್ಮ ಯೋಜನೆಗಳಿಂದ ಹೆದರಿದ್ದಾರೆ’ ಎಂದರು. 

ಪ್ರಚಾರದ ವೇಳೆ, ಶಿಕ್ಷಣ, ಆರೋಗ್ಯ, ವಿದ್ಯುತ್‌ ಮತ್ತು ನೀರಿನ ಬಿಲ್‌ಗಳಿಗೆ ನೀಡುತ್ತಿರುವ ರಿಯಾಯಿತಿ ಸೇರಿದಂತೆ ಎಎಪಿಯ ಕೆಲಸಗಳ ಬಗ್ಗೆ ಹೊಗಳಿದರು.

ಪ್ರಚಾರದಲ್ಲಿ ಮಾತನಾಡಿದ ಕೇಜ್ರಿವಾಲ್‌, ‘ಬಿಜೆಪಿ ಮತ್ತು ಕಾಂಗ್ರೆಸ್ ಒಟ್ಟಾಗಿ ಸೇರಿ ಎಎಪಿಯನ್ನು ಅಧಿಕಾರದಿಂದ ಕೆಳಕ್ಕಿಳಿಸಲು ಪ್ರಯತ್ನ ಮಾಡುತ್ತಿದೆ. ಬಿಜೆಪಿಗೆ ಮತ ಹಾಕುವುದು ಅಥವಾ ಕಾಂಗ್ರೆಸ್‌ಗೆ ಮತ ಹಾಕುವುದು ಎರಡೂ ಒಂದೇ ಸಮ. ತಪ್ಪಾದ ಬಟನ್‌ ಒತ್ತಬೇಡಿ, ಬದುಕು ಶೋಚನೀಯವಾಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.