ಡ್ರಗ್ಸ್ (ಸಾಂದರ್ಭಿಕ ಚಿತ್ರ)
ಚಂಪಾವತ್: ಉತ್ತರಾಖಂಡದ ಚಂಪಾವತ್ ಜಿಲ್ಲೆಯ ಬನ್ಬಾಸಾ ಪ್ರದೇಶದಲ್ಲಿ ₹10.23 ಕೋಟಿ ಮೌಲ್ಯದ 5.688 ಕೆ.ಜಿ ಎಂಡಿಎಂಎ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದು, ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಬನ್ಬಾಸಾ ಪ್ರದೇಶದ ಭಾರತ-ನೇಪಾಳ ಗಡಿಯಲ್ಲಿ 22 ವರ್ಷದ ಇಶಾ ಎಂಬುವವರನ್ನು ಬಂಧಿಸಲಾಗಿದೆ ಎಂದು ಚಂಪಾವತ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಜಯ್ ಗಣಪತಿ ತಿಳಿಸಿದ್ದಾರೆ.
ಗಡಿಯಲ್ಲಿ ಇಶಾ ಕಪ್ಪು ಬಣ್ಣದ ಬ್ಯಾಗ್ ಹಾಕಿಕೊಂಡು ಓಡುತ್ತಿರುವುದನ್ನು ಗಮನಿಸಿದ್ದ ಗಸ್ತು ತಂಡವು ಆಕೆಯನ್ನು ತಡೆದು ತಪಾಸಣೆ ನಡೆಸಿತ್ತು. ಆಕೆಯ ಬ್ಯಾಗ್‌ನಲ್ಲಿ 2 ಪ್ಯಾಕೆಟ್ ಮಾದಕ ವಸ್ತುಗಳು ಪತ್ತೆಯಾಗಿದ್ದು, ಆಕೆ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಗಣಪತಿ ಹೇಳಿದ್ದಾರೆ.
ನನ್ನ ಪತಿ ರಾಹುಲ್ ಕುಮಾರ್ ಮತ್ತು ಆತನಸ ಹಚರ ಕುನಾಲ್ ಕೊಹ್ಲಿ ಅವರು ಜೂನ್‌ನಲ್ಲಿ ಉತ್ತರಾಖಂಡದ ಪಿಥೋರಗಢದಿಂದ ಮಾದಕ ವಸ್ತುಗಳನ್ನು ತಂದಿದ್ದರು. ಆದರೆ, ಪೊಲೀಸರ ನಡೆಯುತ್ತಿರುವ ಮಾದಕ ವಸ್ತು ವಿರೋಧಿ ಕಾರ್ಯಾಚರಣೆಗೆ ಹೆದರಿ, ಮಾದಕ ವಸ್ತುಗಳನ್ನು ಎಸೆಯಲು ಕಾಲುವೆಯ ಕಡೆಗೆ ಹೋಗುತ್ತಿದ್ದೆ ಎಂದು ಮಹಿಳೆ ಹೇಳಿಕೊಂಡಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.
ಪ್ರಕರಣ ಸಂಬಂಧ ರಾಹುಲ್ ಕುಮಾರ್ ಮತ್ತು ಕೊಹ್ಲಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.