
ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆ ಮತದಾನ ಮುಗಿಯುತ್ತಿದ್ದಂತೆ ಮತದಾನೋತ್ತರ ಸಮೀಕ್ಷೆಗಳ ಭರಾಟೆ ಶುರುವಾಗಿದ್ದು,ಎನ್‌ಡಿಎ ಮತ್ತು ಮಹಾಘಟ ಬಂಧನ್ ನಡುವೆ ಅಧಿಕಾರಕ್ಕೆ ಸಮಬಲದ ಪೈಪೋಟಿ ನಡೆದಿದೆ ಎಂದು ಸಮೀಕ್ಷೆಗಳು ತಿಳಿಸಿವೆ.
ಕೆಲವು ಸುದ್ದಿ ವಾಹಿನಿಗಳು ಆರ್‌ಜೆಡಿ, ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿವೆ. ಇನ್ನು ಕೆಲ ಸುದ್ದಿ ವಾಹಿನಿಗಳು ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತೆ ಅಧಿಕಾರ ಹಿಡಿಯಲಿದೆ ಎಂದು ತಿಳಿಸಿವೆ. ಒಟ್ಟಾರೆ ಸಮೀಕ್ಷೆ ಪ್ರಕಾರ ಎನ್‌ಡಿಎ ಮತ್ತು ಮಹಾಘಟಬಂಧನ್ ನಡುವೆ ತೀವ್ರ ಪೈಪೋಟಿ ಏರ್ಪಡಲಿದೆ. ಮತ್ತೆ ಕೆಲವು ಸುದ್ದಿ ವಾಹಿನಿಗಳು ಬಿಹಾರದಲ್ಲಿ ಅಂತತ್ರ ಪರಿಸ್ಥಿತಿ ಏರ್ಪಡಲಿದೆ ಎಂದು ಭವಿಷ್ಯ ನುಡಿದಿವೆ.
ಟಿವಿ9 ಭರತ್‌ವರ್ಷ್
| ಒಟ್ಟು ಸ್ಥಾನಗಳು | ಸರಳ ಬಹುಮತ | ಬಿಜೆಪಿ–ಜೆಡಿಯು (ಎನ್‌ಡಿಎ) | ಕಾಂಗ್ರೆಸ್–ಆರ್‌ಜೆಡಿ (ಮಹಾಘಟ ಬಂಧನ್)  |  ಎಲ್‌ಜೆಪಿ | ಇತರೆ | 
| 243 | 122 | 110-120 | 115-125 | 3-5 | 10-15 | 
ಸಿವೋಟರ್ ಸಮೀಕ್ಷೆ
| ಒಟ್ಟು ಸ್ಥಾನಗಳು | ಸರಳ ಬಹುಮತ | ಬಿಜೆಪಿ–ಜೆಡಿಯು (ಎನ್‌ಡಿಎ) | ಕಾಂಗ್ರೆಸ್–ಆರ್‌ಜೆಡಿ (ಮಹಾಘಟ ಬಂಧನ್)  |  ಎಲ್‌ಜೆಪಿ | ಇತರೆ | |||
| 243 | 122 | 116 | 120 | 01 | 06 | |||
ಜನ್ ಕಿ ಬಾತ್ ಸಮೀಕ್ಷೆ
| ಒಟ್ಟು ಸ್ಥಾನಗಳು |   ಸರಳ ಬಹುಮತ  |  ಬಿಜೆಪಿ–ಜೆಡಿಯು (ಎನ್‌ಡಿಎ) | ಕಾಂಗ್ರೆಸ್–ಆರ್‌ಜೆಡಿ (ಮಹಾ ಮೈತ್ರಿ)  |  ಎಲ್‌ಜೆಪಿ | ಇತರೆ | 
| 243 | 122 | 91-117 | 118-138 | 5-8 | 3-6 | 
ಟೈಮ್ಸ್ ನೌ ಸಿವೋಟರ್
| ಒಟ್ಟು ಸ್ಥಾನಗಳು | ಸರಳ ಬಹುಮತ | ಬಿಜೆಪಿ–ಜೆಡಿಯು (ಎನ್‌ಡಿಎ) | ಕಾಂಗ್ರೆಸ್–ಆರ್‌ಜೆಡಿ (ಮಹಾ ಮೈತ್ರಿ)  |  ಇತರೆ | 
| 243 | 122 | 116 | 120 | 07 | 
ಟುಡೇಸ್ ಚಾಣಕ್ಯಸಮೀಕ್ಷೆ
| ಒಟ್ಟು ಸ್ಥಾನಗಳು | ಸರಳ ಬಹುಮತ | ಬಿಜೆಪಿ–ಜೆಡಿಯು (ಎನ್‌ಡಿಎ) | ಕಾಂಗ್ರೆಸ್–ಆರ್‌ಜೆಡಿ (ಮಹಾ ಮೈತ್ರಿ)  |  ಇತರೆ | 
| 243 | 122 | 55 | 180 | 08 | 
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.