70 ಮೀಟರ್ ಉದ್ದದ ಸೌರಶಕ್ತಿ ಉತ್ಪಾದನಾ ಫಲಕ
ಬನಾರಸ್: ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಬನಾರಸ್ ಲೋಕೋಮೋಟಿವ್ ವರ್ಕ್ಸ್ (BLW) ವತಿಯಿಂದ ಹಳಿಗಳ ನಡುವೆ 70 ಮೀಟರ್ ಉದ್ದದ ಸೌರಶಕ್ತಿ ಉತ್ಪಾದನಾ ಫಲಕಗಳನ್ನು ಭಾರತೀಯ ರೈಲ್ವೆ ಅಳವಡಿಸಿದೆ. ಹಸಿರು ಇಂಧನ ಸುಸ್ಥಿರ ರೈಲು ಸಾಗಣೆ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗಿದೆ ಎಂದು ರೈಲ್ವೆ ಸಚಿವಾಲಯ ಹೇಳಿದೆ.
ಒಟ್ಟು 28 ಪ್ಯಾನಲ್‌ಗಳಿರುವ ಈ ಸೌರ ಫಲಕವು 15 ಕಿಲೋ ವಾಟ್ ಶಕ್ತಿ ಉತ್ಪಾದನೆಯ ಸಾಮರ್ಥ್ಯ ಹೊಂದಿದೆ. ಆ. 10ರಂದು ಭುಜ್ ಮತ್ತು ನಲಿಯಾ ವಿಭಾಗದ ಸನೋಸಾರಾಯಿಂದ ದಾಹೇಜ್ ಕಡೆಗೆ ಮೊದಲ ಕೈಗಾರಿಕಾ ಉಪ್ಪಿನ ಸರಕು ರೇಕ್ ಪ್ರಯಾಣಿಸಿತು. 3,851 ಟನ್ ಉಪ್ಪನ್ನು ಹೊತ್ತ ರೈಲು ಒಟ್ಟು 673.57 ಕಿ.ಮೀ. ಕ್ರಮಿಸಿತು. ಇದರಿಂದ ರೇಲ್ವೆ ಇಲಾಖೆಗೆ ₹31.69 ಲಕ್ಷ ಆದಾಯ ಬಂದಿದೆ. ಇದು ಉಪ್ಪಿನ ಕೈಗಾರಿಕೆಗೆ ಹೊಸ ದಾರಿಯನ್ನು ಸಿದ್ಧಪಡಿಸಿದೆ’ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ನಾಗ್ದಾ–ಖಾಚ್ರೋಡ್ ಮಾರ್ಗದಲ್ಲಿ ದೇಶದ ಮೊದಲ 2×25 ಕಿಲೋ ವಾಟ್ ಎಲೆಕ್ಟ್ರಿಕ್ ಟ್ರಾಕ್ಷನ್ ವ್ಯವಸ್ಥೆಗೆ ಪಶ್ಚಿಮ ರೇಲ್ವೆ ರತ್ನಲಂ ವಿಭಾಗ ಚಾಲನೆ ನೀಡಿತು. ಇದರಲ್ಲಿ ಎರಡು ಸ್ಕಾಟ್-ಕನೆಕ್ಟೆಡ್ 100 MVA ಪವರ್ ಟ್ರಾನ್ಸ್‌ಫಾರ್ಮರ್‌ಗಳು ಸೇರಿದ್ದು, ಓವರ್‌ಹೆಡ್ ಎಕ್ವಿಪ್‌ಮೆಂಟ್‌ಗೆ ಶಕ್ತಿ ಪೂರೈಕೆ ಮಾಡಲಾಗಿದೆ. ನಾಗ್ದಾ ಟ್ರಾಕ್ಷನ್ ಸಬ್‌ಸ್ಟೇಷನ್ ಭಾರತದಲ್ಲಿ ಮೊದಲ ಬಾರಿಗೆ ಸ್ಕಾಟ್ ಟ್ರಾನ್ಸ್‌ಫಾರ್ಮರ್ ತಂತ್ರಜ್ಞಾನದಿಂದ ವಿದ್ಯುದೀಕರಣಗೊಂಡಿದೆ ಎಂಬುದೂ ವಿಶೇಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.