
ಇಂಡಿಗೊ ವಿಮಾನ
ನವದೆಹಲಿ: ವಿಮಾನಗಳ ಸಂಚಾರ ರದ್ದತಿಯಿಂದಾಗಿ ವ್ಯಾಪಕ ಆಕ್ರೋಶಕ್ಕೆ ತುತ್ತಾಗಿರುವ ಇಂಡಿಗೊ ವಿಮಾನಸಂಸ್ಥೆಯು ಪ್ರಯಾಣಿಕರಿಗೆ ಈವರೆಗೆ ₹ 569 ಕೋಟಿ ಮರುಪಾವತಿಸಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ (ಡಿಜಿಸಿಎ) ತಿಳಿಸಿದೆ.
9 ಸಾವಿರದಷ್ಟು ಸಾಮಾನು ಸರಂಜಾಮುಗಳ ಪೈಕಿ, 4,500ರಷ್ಟನ್ನು ಗ್ರಾಹಕರಿಗೆ ತಲುಪಿಸಲಾಗಿದೆ. ಮುಂದಿನ 36 ಗಂಟೆಯೊಳಗೆ ಉಳಿದ ಸರಕನ್ನೂ ತಲುಪಿಸುವ ಗುರಿ ಹಾಕಿಕೊಂಡಿದೆ ಎಂದೂ ಹೇಳಿದೆ.
ಸಚಿವಾಲಯದ ಮಾಹಿತಿ ಪ್ರಕಾರ, ಡಿಸೆಂಬರ್ 1ರಿಂದ 7ರ ವರೆಗೆ ಸುಮಾರು 5.86 ಲಕ್ಷಕ್ಕೂ ಅಧಿಕ ಪಿಎನ್‌ಆರ್‌ಗಳನ್ನು (ಪ್ರಯಾಣಿಕರ ಹೆಸರಿನ ದಾಖಲೆಗಳನ್ನು) ಅಳಿಸಲಾಗಿದೆ. ಇದರರ್ಥ, ಇಂಡಿಗೊ ವಿಮಾನ ಸಂಚಾರದ ವ್ಯತ್ಯಯದಿಂದಾಗಿ 5.87 ಲಕ್ಷ ಜನರು ತೊಂದರೆ ಅನುಭವಿಸಿದ್ದಾರೆ.
ಡಿಸೆಂಬರ್ 1 ರಿಂದ, ತೊಂದರೆಗೆ ಸಿಲುಕಿರುವ ಗ್ರಾಹಕರಿಗೆ ನೆರವಾಗಲು 9,500ಕ್ಕೂ ಹೆಚ್ಚು ಹೋಟೆಲ್ ಕೊಠಡಿಗಳು, ಸುಮಾರು 10,000 ಕ್ಯಾಬ್‌ಗಳು ಮತ್ತು ಬಸ್‌ಗಳ ವ್ಯವಸ್ಥೆ ಮಾಡಿರುವುದಾಗಿ ವಿಮಾನಯಾನ ಸಂಸ್ಥೆ ಹೇಳಿಕೆ ನಿಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.