ADVERTISEMENT

ವಿಮಾನದಲ್ಲಿ ಸಿಗರೇಟು ಸೇದಿರುವ ದೇಹದಾರ್ಡ್ಯ ಪಟು ರಸ್ತೆಯಲ್ಲೇ ಮದ್ಯ ಸೇವಿಸಿದ್ದ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 15:48 IST
Last Updated 11 ಆಗಸ್ಟ್ 2022, 15:48 IST
ಮಧ್ಯ ರಸ್ತೆಯಲ್ಲೇ ಮದ್ಯ ಸೇವಿಸುತ್ತಿರುವ ಬಾಬಿ ಕಟಾರಿಯಾ
ಮಧ್ಯ ರಸ್ತೆಯಲ್ಲೇ ಮದ್ಯ ಸೇವಿಸುತ್ತಿರುವ ಬಾಬಿ ಕಟಾರಿಯಾ    

ಡೆಹ್ರಾಡೂನ್‌: ವಿಮಾನದಲ್ಲೇ ಸಿಗರೇಟು ಸೇದಿ ವಿವಾದಕ್ಕೆ ಗುರಿಯಾಗಿರುವ ದೇಹದಾರ್ಢ್ಯಪಟು ಬಾಬಿ ಕಟಾರಿಯಾ ಎಂಬಾತ ನಡುರಸ್ತೆಯಲ್ಲೇ ಮದ್ಯೆ ಕುಡಿದಿರುವುದೂ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿದೆ.

ಉತ್ತರಾಖಂಡದ ರಸ್ತೆಯ ಮಧ್ಯದಲ್ಲೇ ಮದ್ಯ ಸೇವಿಸುತ್ತಿರುವ ವಿಡಿಯೊವನ್ನು ಬಾಬಿ ಕಟಾರಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಸಂಬಂಧ ಡೆಹ್ರಾಡೂನ್‌ನ ಕ್ಯಾಂಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

‘ರಸ್ತೆಯಲ್ಲೇ ಆನಂದಿಸುವ ಸಮಯ’ ಎಂದು ತಮ್ಮ ವಿಡಿಯೊಗೆ ಬಾಬಿ ಅಡಿಬರಹವನ್ನೂ ನೀಡಿದ್ದರು.

ದೇಹದಾರ್ಡ್ಯ ಪಟು ಬಾಬಿ ಕಟಾರಿಯಾ, ಸ್ಪೈಸ್‌ಜೆಟ್‌ ವಿಮಾನದಲ್ಲಿ ಧೂಮಪಾನ ಮಾಡಿದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಸಂಬಂಧ ತನಿಖೆ ನಡೆಸುವಂತೆ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.