ADVERTISEMENT

ಕೆಟ್ಟ ಯೋಚನೆ ಬೇಡ, ಎಲ್ಲ ವಿಷಯಕ್ಕೂ ಧರ್ಮವನ್ನು ಎಳೆದು ತರಬೇಡಿ: ಇರ್ಫಾನ್ ಪಠಾಣ್

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2019, 13:40 IST
Last Updated 5 ಆಗಸ್ಟ್ 2019, 13:40 IST
   

ನವದೆಹಲಿ: ಜಮ್ಮು ಕಾಶ್ಮೀರದಲ್ಲಿರುವ ಇತರ ರಾಜ್ಯದ ಜನರು ಆದಷ್ಟು ಬೇಗ ವಾಪಸ್ ಬರಬೇಕು ಎಂದು ಹೇಳಿರುವ ಕೇಂದ್ರ ಸರ್ಕಾರದ ನಿಲುವನ್ನು ಪ್ರಶ್ನಿಸುತ್ತಿರುವ ಜನರಿಗೆ ಭಾರತೀಯ ಕ್ರಿಕೆಟಿಗ ಇರ್ಫಾನ್ ಪಠಾಣ್ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ರಣಜಿ ತಂಡದ ಆಟಗಾರ ಮತ್ತು ಸಲಹೆಗಾರರಾಗಿರುವ ಪಠಾಣ್ ಸೇರಿದಂತೆ 100 ಮಂದಿ ಕ್ರಿಕೆಟಿಗರಲ್ಲಿ ಜಮ್ಮು ಕಾಶ್ಮೀರದಿಂದ ವಾಪಸ್ ಬರುವಂತೆ ಹೇಳಲಾಗಿದೆ.

ಕಾಶ್ಮೀರ ವಿಷಯ ಬಗ್ಗೆ ಪ್ರತಿಕ್ರಿಯಿಸಿದ ಪಠಾಣ್, ನನ್ನ ಮನಸ್ಸು ಮತ್ತು ಹೃದಯ ಕಾಶ್ಮೀರದಲ್ಲಿರುವ ಭಾರತೀಯ ಸೇನೆ ಮತ್ತು ಅಲ್ಲಿನ ಸಹೋದರ ಸಹೋದರಿಯರಿಗಾಗಿ ಮಿಡಿಯುತ್ತಿದೆ ಎಂದಿದ್ದಾರೆ.ಇದರ ನಂತರ ಇನ್ನೊಂದು ಟ್ವೀಟ್ ಮಾಡಿದ ಅವರು,ಅಮರನಾಥ ಯಾತ್ರೆಯನ್ನು ನಿಲ್ಲಿಸುವಂತೆ ಯಾತ್ರಿಕರಿಗೆ ಹೇಳಲಾಗಿದೆ.ಬೆದರಿಕೆ ಇರುವ ಕಾರಣವೇ ಯಾತ್ರೆ ನಿಲ್ಲಿಸಿ ಎಂದು ಹೇಳಿರುವುದು.ಅಲ್ಲಿ ಭದ್ರತಾ ವ್ಯವಸ್ಥೆ ಮಾಡಿಸಿದ್ದು ಅದಕ್ಕಾಗಿಯೇ. ನಿಮ್ಮ ಕೆಟ್ಟ ಯೋಚನೆಗಳನ್ನು ಬಿಡಿ. ಎಲ್ಲ ವಿಷಯಕ್ಕೂ ಧರ್ಮವನ್ನು ಎಳೆದು ತರಬೇಡಿ. ಎಲ್ಲದಕ್ಕೂ ಸಾಕ್ಷ್ಯ ಕೇಳಬೇಡಿ ಎಂದಿದ್ದಾರೆ.

ADVERTISEMENT

ಇದಕ್ಕಿಂತ ಮುನ್ನ ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಪಠಾಣ್, ನಮ್ಮ ಶಿಬಿರವನ್ನು ಮುಚ್ಚಿಸಿ, ಕ್ರಿಕೆಟಿಗರನ್ನು ಅವರವರ ಮನೆಗೆ ಕಳಿಸಲಾಗಿದೆ.ಜೂನ್ 14 ರಿಂದ ಜುಲೈ 14ರವರೆಗೆ ಶಿಬಿರ ನಡೆದಿದ್ದು10 ದಿವಸಗಳ ವಿರಾಮ ನಂತರ ಜುಲೈ 25ರಂದು ಪುನರಾರಂಭವಾಗಿತ್ತು.ಆಗಸ್ಟ್ 4ರಂದುಸುಮಾರು 100 ಆಟಗಾರರನ್ನು ವಾಪಸ್ ಕಳಿಸಲಾಗಿತ್ತು ಎಂದಿದ್ದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.