ADVERTISEMENT

ಅಂಬಾನಿ ನಿವಾಸದ ಬಳಿ ಸ್ಫೋಟಕ: ಹೊಣೆ ಹೊತ್ತ ಜೈಷ್ ಉಲ್ ಹಿಂದ್

ಪಿಟಿಐ
Published 28 ಫೆಬ್ರುವರಿ 2021, 15:49 IST
Last Updated 28 ಫೆಬ್ರುವರಿ 2021, 15:49 IST
ಅಂಬಾನಿ ಅವರ ‘ಅಂಟಿಲಿಯಾ’ ಐಷಾರಾಮಿ ನಿವಾಸದ ಹೊರಭಾಗದಲ್ಲಿ ಭದ್ರತಾ ಸಿಬ್ಬಂದಿ – ಪಿಟಿಐ ಚಿತ್ರ
ಅಂಬಾನಿ ಅವರ ‘ಅಂಟಿಲಿಯಾ’ ಐಷಾರಾಮಿ ನಿವಾಸದ ಹೊರಭಾಗದಲ್ಲಿ ಭದ್ರತಾ ಸಿಬ್ಬಂದಿ – ಪಿಟಿಐ ಚಿತ್ರ   

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಐಷಾರಾಮಿ ನಿವಾಸದ ಸಮೀಪದಲ್ಲಿ ಸ್ಫೋಟಕಗಳನ್ನು ಇಟ್ಟಿದ್ದ ಹೊಣೆಯನ್ನು ಜೈಷ್–ಉಲ್–ಹಿಂದ್ ಹೆಸರಿನ ಸಂಘಟನೆ ಹೊತ್ತುಕೊಂಡಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಎಲ್ಲ ದೃಷ್ಟಿಕೋನಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸ್ಫೊಟಕಗಳನ್ನು ಇಟ್ಟ ಹೊಣೆ ಹೊತ್ತುಕೊಂಡ ಬಗ್ಗೆ ಸಂಘಟನೆಯು ಮೆಸೇಜಿಂಗ್ ಆ್ಯಪ್ ಟೆಲಿಗ್ರಾಂನಲ್ಲಿ ಸಂದೇಶ ಹರಿಯಬಿಟ್ಟಿತ್ತು. ಅದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ಮುಂಬೈ ಪೊಲೀಸರ ಗಮನಕ್ಕೆ ಬಂದಿದೆ ಎಂದು ಅವರು ತಿಳಿಸಿದ್ದಾರೆ.

ಅಂಬಾನಿ ಅವರ ಐಷಾರಾಮಿ ನಿವಾಸ ‘ಅಂಟಿಲಿಯಾ‘ ಸಮೀಪ ಗುರುವಾರ ಸಂಜೆ ಸ್ಫೋಟಕ ತುಂಬಿದ್ದ ಎಸ್‌ಯುವಿ ಪತ್ತೆಯಾಗಿದ್ದು, ಪೊಲೀಸರು ಜಫ್ತಿ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಸ್ಫೋಟಕ ಇರಿಸಲಾಗಿದ್ದ ಎಸ್‌ಯುವಿ ಕೆಲವು ದಿನಗಳ ಹಿಂದಷ್ಟೇ ಕಳವಾಗಿತ್ತು ಎಂಬ ಮಾಹಿತಿ ಬಳಿಕ ಪೊಲೀಸರಿಗೆ ಲಭ್ಯವಾಗಿತ್ತು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.