ADVERTISEMENT

Union Budget | ಫೆ.1ರಂದು ಮಧ್ಯಂತರ ಬಜೆಟ್ ಮಂಡನೆ: ಪ್ರಲ್ಹಾದ ಜೋಶಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜನವರಿ 2024, 8:09 IST
Last Updated 12 ಜನವರಿ 2024, 8:09 IST
<div class="paragraphs"><p>ನೂತನ ಸಂಸತ್‌ ಭವನ</p></div>

ನೂತನ ಸಂಸತ್‌ ಭವನ

   ಪಿಟಿಐ ಚಿತ್ರ

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರುವರಿ 1 ರಂದು ಮಧ್ಯಂತರ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

17ನೇ ಲೋಕಸಭೆಯ ಕೊನೆಯ ಅವಧಿಯಾಗಿರುವ ಮಧ್ಯಂತರ ಬಜೆಟ್ ಅಧಿವೇಶನವು ಜನವರಿ 31 ರಿಂದ ಫೆಬ್ರುವರಿ 9 ರವರೆಗೆ ನಡೆಯಲಿದೆ. ಈ ಸಮಯದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ತನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ADVERTISEMENT

ಏನಿದು ಮಧ್ಯಂತರ ಬಜೆಟ್‌ :

5 ವರ್ಷಗಳ ಪೂರ್ಣಾವಧಿಯ ಕೇಂದ್ರ ಸರ್ಕಾರ ತನ್ನ ಕೊನೆಯ ಬಜೆಟ್‌ ಅನ್ನು ಸಾಮಾನ್ಯವಾಗಿ ಮಧ್ಯಂತರ ಬಜೆಟ್‌ ಎಂದು ಕರೆಯುತ್ತದೆ. ಚಾಲ್ತಿಯಲ್ಲಿರುವ ಹಣಕಾಸು ವರ್ಷದ ಆರಂಭಕ್ಕೆ ಅಥವಾ ಕೊನೆಗೆ ಸಾರ್ವತ್ರಿಕ ಚುನಾವಣೆ ಬಂದರೆ ಆಗ ಮಂಡಿಸುವ ಬಜೆಟ್‌ ಪೂರ್ಣಕಾಲಿಕ ಬಜೆಟ್ ಆಗಿರುವುದಿಲ್ಲ. ಕೆಲವೇ ತಿಂಗಳ ಅವಧಿಯ ಖರ್ಚು ವೆಚ್ಚಗಳನ್ನು ನಿರ್ವಹಿಸುವ ಮುಂಗಡಪತ್ರವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.