ADVERTISEMENT

2024ರ ಲೋಕಸಭೆ ಚುನಾವಣೆ: ₹ 1,494 ಕೋಟಿ ಖರ್ಚು ಮಾಡಿದ ಬಿಜೆಪಿ

ಪಿಟಿಐ
Published 20 ಜೂನ್ 2025, 11:32 IST
Last Updated 20 ಜೂನ್ 2025, 11:32 IST
<div class="paragraphs"><p>ಬಿಜೆಪಿ</p></div>

ಬಿಜೆಪಿ

   

ನವದೆಹಲಿ: 2024ರ ಲೋಕಸಭೆ ಚುನಾವಣೆ ವೇಳೆಯಲ್ಲಿ ಆಡಳಿತರೂಢ ಬಿಜೆಪಿ ₹ 1,494 ಕೋಟಿ ಖರ್ಚು ಮಾಡಿದೆ, ಇದು ಒಟ್ಟು ಖರ್ಚಿನ ಶೇ 44.56ರಷ್ಟು ಎಂದು ಸ್ವಯಂ ಸೇವಾ ಸಂಸ್ಥೆ ಅಸೋಸಿಯೇಷನ್‌ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್’ (ಎಡಿಆರ್‌) ಶುಕ್ರವಾರ ತಿಳಿಸಿದೆ.

ರಾಷ್ಟ್ರೀಯ ಹಾಗೂ ಪ್ರಾದೇಶಿಕ ಸೇರಿ ಒಟ್ಟು 32 ಪಕ್ಷಗಳ ಖರ್ಚನ್ನು ಎಡಿಆರ್‌ ವಿಶ್ಲೇಷಿಸಿದೆ.

ADVERTISEMENT

ಎರಡನೇ ಸ್ಥಾನದಲ್ಲಿ ಕಾಂಗ್ರೆಸ್ ಇದ್ದು, ತನ್ನ ಖರ್ಚಿನ ಶೇ 18.5ರಷ್ಟು (₹620 ಕೋಟಿ) 2024ರ ಲೋಕಸಭೆ ಚುನಾವಣೆಗೆ ವ್ಯಯಿಸಿದೆ ಎಂದು ಅವರು ಮಾಹಿತಿ ನೀಡಿದೆ.

2024ರಲ್ಲಿ ನಡೆದ ಲೋಕಸಭೆ ಚುನಾವಣೆ ಹಾಗೂ ಆಂಧ್ರಪ್ರದೇಶ, ಒಡಿಶಾ ಹಾಗೂ ಸಿಕ್ಕಿಂ ವಿಧಾನಸಭೆ ಚುನಾವಣೆಯಲ್ಲಿ ಈ ಎಲ್ಲಾ ಪಕ್ಷಗಳು ₹ 3,352.81 ಕೋಟಿ ಖರ್ಚು ಮಾಡಿವೆ.

ರಾಷ್ಟ್ರೀಯ ಪಕ್ಷಗಳು ₹ 2,204 ಕೋಟಿ ಖರ್ಚು ಮಾಡಿದ್ದು, ಇದು ಅವುಗಳ ಒಟ್ಟು ಆದಾಯದ ಶೇ 65.75ಕ್ಕೆ ಸಮ.

ರಾಷ್ಟ್ರೀಯ ಪಕ್ಷಗಳು ₹ 6,930.246 ಕೋಟಿ (ಶೇ 93.08) ದೇಣಿಗೆ ಸಂಗ್ರಹಿಸಿದ್ದು, ಪ್ರಾದೇಶಿಕ ಪಕ್ಷಗಳಿಗೆ ₹ 515.32 ಕೋಟಿ (6.92%) ದೇಣಿಗೆ ಲಭಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.