ಸಾಂದರ್ಭಿಕ ಚಿತ್ರ
ವಾರಣಾಸಿಯ ಹರಿಶ್ಚಂದ್ರ ಘಾಟ್‌ನ ಸ್ಮಶಾನದಲ್ಲಿ ಶುಕ್ರವಾರ ಮಸಾನ್ ಹೋಳಿಯನ್ನು ಆಚರಿಸಲಾಯಿತು. ಮಸಾನ್ ಹೋಳಿ ಎಂದರೆ ಸ್ಮಶಾನದಲ್ಲಿ ಬಣ್ಣಗಳ ಬದಲಿಗೆ ಬೂದಿ ಅಥವಾ ಚಿತಾ ಭಸ್ಮವನ್ನು ಹಚ್ಚಿಕೊಂಡು ಆಚರಿಸುವ ಆಚರಣೆಯಾಗಿದೆ.
ಆಚರಣೆಯ ಸಮಯದಲ್ಲಿ ಜನರು ಪರಸ್ಪರ ಚಿತೆಯ ಚಿತಾಭಸ್ಮವನ್ನು ಹಚ್ಚಿಕೊಳ್ಳುತ್ತಾರೆ. ಶಿವನ ನಿಷ್ಠಾವಂತ ಗಣಗಳಂತೆ ವೇಷ ಧರಿಸಿದ ಅನೇಕ ಭಕ್ತರು, ತಲೆಯಿಂದ ಪಾದದವರೆಗೆ ಬೂದಿಯನ್ನು ಹಚ್ಚಿಕೊಂಡರು. ಇದೇ ವೇಳೆ ಜನಪ್ರಿಯ ಹೋಳಿ ಹಾಡುಗಳಿಗೆ ನೃತ್ಯ ಮಾಡುತ್ತಾ, ಉತ್ಸಾಹದಿಂದ ಆಚರಣೆಯಲ್ಲಿ ಭಾಗಿಯಾದರು.
ಕಾಶಿಯ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕತೆಯಲ್ಲಿ ಮಸಾನ್ ಹೋಳಿಗೆ ವಿಶೇಷ ಸ್ಥಾನವಿದೆ. ಚಿತೆಯ ಚಿತಾಭಸ್ಮದಿಂದ ಆಚರಿಸುವ ಸಂಪ್ರದಾಯಿಕ ಹೋಳಿ ಹಬ್ಬ ಮಹತ್ವದ್ದಾಗಿದೆ. ಈ ಆಚರಣೆಯ ಮೂಲಕ, ಸಾವನ್ನು ಜೀವನ ಚಕ್ರದ ಭಾಗವಾಗಿ ಅಂಗೀಕರಿಸಲಾಗುತ್ತದೆ.
ಈ ವರ್ಷ, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಚರಣೆಯಲ್ಲಿ ಭಾಗವಹಿಸಿದ್ದರು. ಸ್ಥಳೀಯ ನಿವಾಸಿಗಳು ಮತ್ತು ದೇಶದ ವಿವಿಧೆಡೆಯಿಂದ ಆಗಮಿಸಿದ ಭಕ್ತರು ಉತ್ಸವದಲ್ಲಿ ಭಾಗಿಯಾದರು. ಬೂದಿ ಹಚ್ಚಿಕೊಂಡು ಜನರು ಹೋಳಿ ಹಬ್ಬವನ್ನು ಸಂಭ್ರಮಿಸಿದರು.
ಹರಿಶ್ಚಂದ್ರ ಘಾಟ್‌ನಲ್ಲಿ ಸಂಗೀತ ಮತ್ತು ನೃತ್ಯ ಪ್ರದರ್ಶನ ಆಯೋಜಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.