ADVERTISEMENT

ಉತ್ತರಾಖಂಡ: ಭೂಕುಸಿತ ಸಂಕಷ್ಟದಲ್ಲಿ ಯಾತ್ರಿಗಳು

ಪಿಟಿಐ
Published 2 ಜೂನ್ 2023, 0:31 IST
Last Updated 2 ಜೂನ್ 2023, 0:31 IST
   

ಪಿಥೋರ್‌ಗಢ: ಉತ್ತರಾಖಂಡದ ಧಾರ್ಚುಲಾದಿಂದ 45 ಕಿ.ಮೀ ದೂರದಲ್ಲಿರುವ ನಜಾಂಗ್‌ ಪ್ರದೇಶದಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು, 200ಕ್ಕೂ ಹೆಚ್ಚು ಆದಿ ಕೈಲಾಸ ಯಾತ್ರಿಗಳು ವಿವಿಧ ಪ್ರದೇಶಗಳಲ್ಲಿ ಸಿಲುಕಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ದೊಡ್ಡ ಪ್ರಮಾಣದಲ್ಲಿ ಮಣ್ಣು ರಸ್ತೆಯ ಮೇಲೆ ಬಿದ್ದಿದ್ದು, ಆದಿ ಕೈಲಾಸಕ್ಕೆ ಹೋಗುವ ಮತ್ತು ಹಿಂದಿರುಗುವ ಮಾರ್ಗದ ವಿವಿಧೆಡೆ  ಯಾತ್ರಿಗಳು ಸಿಲುಕಿಕೊಂಡಿದ್ದಾರೆ ಎಂದು ಧಾರ್ಚುಲಾದ ಉಪ ವಿಭಾಗಾಧಿಕಾರಿ (ಎಸ್‌ಡಿಎಂ) ದೇವೇಶ್‌ ಶಶ್ನಿ ಮಾಹಿತಿ ನೀಡಿದ್ದಾರೆ.

‘ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ. ಧಾರ್ಚುಲಾ, ನಪಾಲ್ಚು, ಗುಂಜಿ ಮತ್ತು ಬುಂಡಿ ಪ್ರದೇಶಗಳಲ್ಲಿ ಭೂಕುಸಿತದ ಅವಶೇಷಗಳನ್ನು ತೆರವುಗಳಿಸುವುದಕ್ಕಾಗಿ ಕಾಯುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ಮೇ 30ರಂದು ಸಂಜೆ ಸಂಭವಿಸಿದ ಭೂಕುಸಿತದಿಂದ 100 ಮೀಟರ್‌ಗೂ ಹೆಚ್ಚು ರಸ್ತೆ ಹಾಳಾಗಿದೆ ಎಂದು ಅವರು ವಿವರಿಸಿದ್ದಾರೆ.

ಜೂನ್ 4ರ ಮೊದಲು ರಸ್ತೆ ಪುನರಾರಂಭ ಆಗುವ ಸಾಧ್ಯತೆ ಇಲ್ಲ ಎಂದು ಅವರು ಹೇಳಿದ್ದಾರೆ. ಈ ವರ್ಷ ಮೇ 4 ರಂದು ಆದಿ ಕೈಲಾಸ ಯಾತ್ರೆ ಆರಂಭವಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.