ADVERTISEMENT

ಹಿಮಪಾತ ಅವಘಡ: ಮೃತರ ಸಂಖ್ಯೆ 50ಕ್ಕೆ ಏರಿಕೆ

ಪಿಟಿಐ
Published 14 ಫೆಬ್ರುವರಿ 2021, 16:43 IST
Last Updated 14 ಫೆಬ್ರುವರಿ 2021, 16:43 IST
ಚಮೋಲಿ ಜಿಲ್ಲೆಯ ತಪೋವನ್ ಸುರಂಗದ ಬಳಿ ಪತ್ತೆಯಾದ ಶವ ಸಾಗಿಸುತ್ತಿರುವ ಎನ್‌ಡಿಆರ್‌ಎಫ್ ಸಿಬ್ಬಂದಿ
ಚಮೋಲಿ ಜಿಲ್ಲೆಯ ತಪೋವನ್ ಸುರಂಗದ ಬಳಿ ಪತ್ತೆಯಾದ ಶವ ಸಾಗಿಸುತ್ತಿರುವ ಎನ್‌ಡಿಆರ್‌ಎಫ್ ಸಿಬ್ಬಂದಿ   

ಡೆಹ್ರಾಡೂನ್/ತಪೋವನ: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಹಿಮಕುಸಿತ, ನಂತರದ ಪ್ರವಾಹದ ತೀವ್ರತೆಗೆ ಸಿಲುಕಿದ್ದ, ತಪೋವನ ಸುರಂಗ ಮತ್ತು ರೈನಿ ವಿದ್ಯುತ್ ಯೋಜನೆ ಸ್ಥಳದಿಂದ ಭಾನುವಾರ ಒಟ್ಟು 12 ಶವಗಳನ್ನು ಹೊರತೆಗೆಯಲಾಗಿದೆ.

ಇದರೊಂದಿಗೆ ಅವಘಡದಲ್ಲಿ ಮೃತರಾದವರ ಸಂಖ್ಯೆ 50ಕ್ಕೆ ಏರಿದೆ. ಇನ್ನೂ 154 ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಹಾಗೂ ಸಿಲುಕಿಕೊಂಡವರ ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರಿದಿದೆ.

ಎನ್‌ಟಿಪಿಸಿಯ 520 ಮೆಗಾ ವಾಟ್‌ನ ತಪೋವನ್‌–ವಿಷ್ಣುಗಡ್ ಯೋಜನೆಯ ಸುರಂಗದಲ್ಲಿ ಕೆಸರು ತೆರವು ಕಾರ್ಯಾಚರಣೆ ವೇಳೆ ಐವರ ಶವಪತ್ತೆಯಾದವು. ಉಳಿದಂತೆ ಆರು ಶವಗಳು 13.2 ಮೆಗಾವಾಟ್ ಸಾಮರ್ಥ್ಯದ ವಿದ್ಯುತ್ ಯೋಜನೆ ರೈನಿ ಹಾಗೂ ಒಂದು ಶವ ರುದ್ರಪ್ರಯಾಗ ನದಿ ಪಾತ್ರದಲ್ಲಿ ಪತ್ತೆಯಾದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಸುರಂಗ ಮಾರ್ಗದಲ್ಲಿ ತುಂಬಿರುವ ಕೆಸರು ತೆರವುಗೊಳಿಸುವ ಕಾರ್ಯದಲ್ಲಿ ರಕ್ಷಣಾ ತಂಡಗಳು ಕಾರ್ಯತತ್ಪರವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.