
ಒಂದು ಗ್ರಾಮ ಪಂಚಾಯತ್ ಒಂದು ಚುನಾವಣೆ, ಗಾಜಾ ಶಾಂತಿ ಸಭೆಗೆ ಮೋದಿಗೆ ಆಹ್ವಾನ, ನ್ಯೂಜಿಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಭಾರತಕ್ಕೆ ಸೊಲು ಸೇರಿದಂತೆ ಈ ದಿನದ ಬೆಳಗಿನ ಪ್ರಮುಖ ಸುದ್ದಿಗಳು ಇಲ್ಲಿವೆ

ರಾಜ್ಯದ ಶೇ 90ರಷ್ಟು ಗ್ರಾಮ ಪಂಚಾಯಿತಿಗಳ ಅವಧಿ ಇನ್ನೆರಡು ತಿಂಗಳ ಒಳಗೆ ಮುಕ್ತಾಯವಾಗಲಿದ್ದು, ಜಿಲ್ಲಾ, ತಾಲ್ಲೂಕು ಪಂಚಾಯಿತಿಗಳ ಜತೆಗೇ ಗ್ರಾಮ ಪಂಚಾಯಿತಿಗಳಿಗೂ ಏಕಕಾಲಕ್ಕೆ ಚುನಾವಣೆ ನಡೆಸಲು ರಾಜ್ಯ ಸರ್ಕಾರ ‘ಮೂರು ಸ್ತರ: ಒಂದು ಗ್ರಾಮ–ಒಂದು ಚುನಾವಣೆ’ ಸೂತ್ರವನ್ನು ಸಿದ್ಧಪಡಿಸುತ್ತಿದೆ.
ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ಮೈಸೂರು: 'ಅಧಿವೇಶನ ಕರೆದಿರುವುದು ರಾಜಕೀಯ ದುರ್ಬಳಕೆ’ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಹೊಸ ವರ್ಷದಲ್ಲಿ ಜಂಟಿ ಅಧಿವೇಶನ ಕಡ್ಡಾಯವಾಗಿ ಕರೆಯಬೇಕೆಂದು ಸಂವಿಧಾನ ಸ್ಪಷ್ಟವಾಗಿ ಹೇಳಿದೆ. ಅದಕ್ಕಾಗಿ ಕರೆದಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಗದಗ ತಾಲ್ಲೂಕಿನ ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದಿರುವ ಉತ್ಖನನದಲ್ಲಿ ಭಾನುವಾರ ಸರ್ಪದ ಚಿತ್ರವಿರುವ ಪ್ರಾಚ್ಯ ಅವಶೇಷ ಸಿಕ್ಕಿದೆ
ಐತಿಹಾಸಿಕ ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದಿರುವ ಉತ್ಖನನದಲ್ಲಿ ಭಾನುವಾರ ಸರ್ಪದ ಚಿತ್ರವಿರುವ ಪ್ರಾಚ್ಯಾವಶೇಷ, ತಾಮ್ರದ ಘಂಟೆ, ಮಣ್ಣಿನ ಧೂಪದಾರತಿ ಗೋಚರಿಸಿದೆ.
ಪ್ರಯಾಗರಾಜ್: ಮಾಘಮೇಳದ ಅಂಗವಾಗಿ ಮೌನಿ ಅಮಾವಾಸ್ಯೆ ದಿನವಾದ ಭಾನುವಾರ ತ್ರಿವೇಣಿ ಸಂಗಮದಲ್ಲಿ 4.52 ಕೋಟಿಗೂ ಅಧಿಕ ಭಕ್ತರು ಪುಣ್ಯಸ್ನಾನ ಮಾಡಿದರು.
(ಸಾಂದರ್ಭಿಕ ಚಿತ್ರ)
ಢಾಕಾ: ಬಾಳೆ ಹಣ್ಣಿನ ವಿಚಾರವಾಗಿ ನಡೆದ ಗಲಾಟೆಯಲ್ಲಿ ಹಿಂದೂ ವ್ಯಾಪಾರಿಯೊಬ್ಬರನ್ನು ಥಳಿಸಿ ಹತ್ಯೆ ಮಾಡಿರುವ ಘಟನೆ ಬಾಂಗ್ಲಾದೇಶದ ಘಾಜಿಪುರ ಜಿಲ್ಲೆಯ ಕಾಳಿಗಂಜ್‌ನಲ್ಲಿ ನಡೆದಿದೆ.
ದಾವೋಸ್: ಸ್ವಿಟ್ಜರ್‌ಲೆಂಡ್‌ನ ದಾವೋಸ್‌ನಲ್ಲಿ ಸೋಮವಾರದಿಂದ ಐದು ದಿನಗಳ ಕಾಲ ವಿಶ್ವ ಆರ್ಥಿಕ ವೇದಿಕೆಯ (ಡಬ್ಲುಇಎಫ್) ವಾರ್ಷಿಕ ಸಭೆ ನಡೆಯಲಿದ್ದು, ಜಾಗತಿಕ ಗಣ್ಯರೊಂದಿಗೆ ಚರ್ಚಿಸಲು ಭಾರತವು ಪ್ರಬಲ ಪ್ರಾತಿನಿಧ್ಯದ ಜತೆ ಸಜ್ಜಾಗಿದೆ.
ಪ್ರಧಾನಿ ನರೇಂದ್ರ ಮೋದಿ
ವಾಷಿಂಗ್ಟನ್, ಅಮೆರಿಕ: ಯುದ್ಧಾನಂತರದ ಗಾಜಾದ ಆಡಳಿತ ಮತ್ತು ಪುನರ್‌ನಿರ್ಮಾಣವನ್ನು ಮೇಲ್ವಿಚಾರಣೆ ನಡೆಸಲು ಉದ್ದೇಶಿಸಲಾದ ‘ಶಾಂತಿ ಮಂಡಳಿ’ ಮತ್ತು ಸಂಬಂಧಿತ ಸಮಿತಿಗಳ ಸಭೆಯಲ್ಲಿ ಭಾಗವಹಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತವು ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪ್ರಪಂಚದಾದ್ಯಂತ ವಿವಿಧ ದೇಶಗಳ ಪ್ರಮುಖರನ್ನು ಸಂಪರ್ಕಿಸಿದೆ.
ಇಂದೋರ್: ಭಾನುವಾರ ರಾತ್ರಿ ವಿರಾಟ್ ಕೊಹ್ಲಿ ಛಲದ ಶತಕ ಮತ್ತು ಹರ್ಷಿತ್ ರಾಣಾ ಅವರ ಸ್ಫೋಟಕ ಅರ್ಧಶತಕ ಮಾತ್ರ ಭಾರತದ ಅಭಿಮಾನಿಗಳ ನೆನಪಿನ ಪುಟದಲ್ಲಿ ಸೇರಿದವು. ಆದರೆ ನ್ಯೂಜಿಲೆಂಡ್ ತಂಡವು 38 ವರ್ಷಗಳ ನಂತರ ಭಾರತದಲ್ಲಿ ಏಕದಿನ ಕ್ರಿಕೆಟ್ ಸರಣಿ ಜಯಿಸಿತು.
ಗಿಲ್ಲಿ ನಟ
ಬೆಂಗಳೂರು: ಖಾಸಗಿ ವಾಹಿನಿಯ ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ ಎಂದೇ ಹೆಸರಾದ ನಟರಾಜ್ ವಿಜೇತರಾಗಿ ಹೊರಹೊಮ್ಮಿದರು. ರಕ್ಷಿತಾ ರನ್ನರ್ ಅಪ್ ಆದರು. ಭಾನುವಾರ ಬಿಡದಿಯ ಜಾಲಿವುಡ್ ಸ್ಟುಡಿಯೋಸ್ನಲ್ಲಿ ನಡೆದ ಫಿನಾಲೆಯಲ್ಲಿ ಕಾರ್ಯಕ್ರಮದ ನಿರೂಪಕ–ನಟ ಸುದೀಪ್ ವಿಜೇತರನ್ನು ಘೋಷಿಸಿ, ಅಭಿನಂದಿಸಿದರು. ಇದರೊಂದಿಗೆ ಬಿಗ್‌ಬಾಸ್ ಕಾರ್ಯಕ್ರಮ ಅಂತ್ಯಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.