ADVERTISEMENT

ಮುಂಬೈನ ವಿಖ್ರೋಲಿಯಲ್ಲಿ ಗುಡ್ಡ ಕುಸಿತ; ಇಬ್ಬರು ಸಾವು

ಪಿಟಿಐ
Published 16 ಆಗಸ್ಟ್ 2025, 6:34 IST
Last Updated 16 ಆಗಸ್ಟ್ 2025, 6:34 IST
   

ಮುಂಬೈ : ‌‌‌ಮುಂಬೈನ ವಿಖ್ರೋಲಿಯಲ್ಲಿ ಶನಿವಾರ ಸುರಿದ ಭಾರಿ ಮಳೆಗೆ ಗುಡ್ಡಕುಸಿತ ಉಂಟಾಗಿದ್ದು, ಇಬ್ಬರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆಂದು ಸ್ಥಳೀಯರು ತಿಳಿಸಿದ್ದಾರೆ. 

ವಿಕ್ರೋಲಿ ಪಾರ್ಕ್‌ಸೈಟ್‌ನ ವರ್ಷಾ ನಗರದಲ್ಲಿ ಬೆಳಗಿನ ಜಾವ 2.39ರ ಸುಮಾರಿಗೆ ಗುಡ್ಡಕುಸಿತ ಉಂಟಾಗಿದೆ. ಅವಘಡದಲ್ಲಿ ಶಾಲು ಮಿಶ್ರಾ (19) ಹಾಗೂ ಸುರೇಶ್ ಮಿಶ್ರಾ (50) ಮೃತಪಟ್ಟಿದ್ದಾರೆ. ಆರತಿ ಮಿಶ್ರಾ (45) ಮತ್ತು ರುತುರಾಜ್ ಮಿಶ್ರಾ (20) ಇಬ್ಬರು ತೀವ್ರವಾಗಿ ಗಾಯಗೊಂಡಿದ್ದು ಸುಧಾರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ನಡುರಾತ್ರಿ ಇದ್ದಕಿದ್ದಂತೆ ಗುಡ್ಡ ಕುಸಿತ ಸಂಭವಿಸಿದೆ.ಗುಡ್ಡದ ಪಕ್ಕದಲ್ಲೇ ಇದ್ದ ಇವರ ಗುಡಿಸಿಲಿನ ಮೇಲೆ ಮಣ್ಣು ಹಾಗೂ ಕಲ್ಲುಗಳು ಬಿದ್ದಿ ಪರಿಣಾಮ ದುರಂತ ಸಂಭವಿಸಿದೆ. ಗಾಯಾಳುಗಳನ್ನು ಸ್ಥಳೀಯ ರಾಜವಾಡಿ ಆಸ್ಪತ್ರೆಗೆ ದಾಖಲಿಸಲಾಯಿತು. ಇಬ್ಬರು ಮೃತಪಟ್ಟಿರುವುದಾಗಿ ಮುಂಬೈ ಮಹಾನಗರ ಪಾಲಿಕೆಯ ಅಧಿಕಾರಿಯೊಬ್ಬರು ಅಧಿಕೃತವಾಗಿ ಹೇಳಿದ್ದಾರೆ. 

ADVERTISEMENT

ನಗರದ ಇತರ ಸ್ಥಳಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ, ಸ್ಥಳೀಯ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.