ಇಫ್ತಾರ್ ಕೂಟದಲ್ಲಿ ದಳಪತಿ ವಿಜಯ್
(ಚಿತ್ರ ಕೃಪೆ–X @ANI)
ಬರೇಲಿ (ಉತ್ತರ ಪ್ರದೇಶ): ಟಿವಿಕೆ ಪಕ್ಷದ ಅಧ್ಯಕ್ಷ, ನಟ ದಳಪತಿ ವಿಜಯ್‌ಗೆ ಮುಸ್ಲಿಮರು ಬೆಂಬಲ ನೀಡಬಾರದು ಎಂದು ಉತ್ತರ ಪ್ರದೇಶದ ಮೌಲ್ವಿಯೊಬ್ಬರು ಫತ್ವಾ ನೀಡಿದ್ದಾರೆ.
‘ವಿಜಯ್ ಅವರು ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದಾರೆ. ಮುಸ್ಲಿಮರೊಂದಿಗೆ ಸೌಹಾರ್ದಯುತ ಸಂಬಂಧವನ್ನು ಇಟ್ಟುಕೊಂಡಿದ್ದಾರೆ. ಆದರೆ ತಮ್ಮ ಚಲನಚಿತ್ರಗಳಲ್ಲಿ ಮುಸ್ಲಿಮರನ್ನು ಭಯೋತ್ಪಾದನೆ ಹರಡುವವರಂತೆ ನಕಾರಾತ್ಮಕ ರೀತಿಯಲ್ಲಿ ಚಿತ್ರಿಸಿದ್ದಾರೆ’ ಎಂದು ಅಖಿಲ ಭಾರತ ಮುಸ್ಲಿಂ ಜಮಾತ್‌ನ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಝ್ವಿ ‘ಎಎನ್‌ಐ’ ಸುದ್ದಿ ಸಂಸ್ಥೆಯೊಂದಿಗೆ ಹೇಳಿದ್ದಾರೆ.
ವಿಜಯ್ ಇಫ್ತಾರ್ ಕೂಟಕ್ಕೆ ಜೂಜುಕೋರರು ಮತ್ತು ಮದ್ಯ ಸೇವಿಸುವವರನ್ನು ಆಹ್ವಾನಿಸಲಾಗಿತ್ತು. ಇದೆಲ್ಲದರಿಂದ ತಮಿಳುನಾಡಿನ ಸುನ್ನಿ ಮುಸ್ಲಿಮರು ಅವರ ಮೇಲೆ ಕೋಪಗೊಂಡಿದ್ದಾರೆ. ಹೀಗಾಗಿ ಫತ್ವಾ ನೀಡಬೇಕು ಎಂದು ನನ್ನನ್ನು ಕೇಳಿದ್ದರು ಎಂದು ಅವರು ತಿಳಿಸಿದ್ದಾರೆ.
ಮುಸ್ಲಿಮರು ವಿಜಯ್‌ಗೆ ಬೆಂಬಲ ನೀಡಬಾರದು. ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬಾರದು ಎಂದು ನಾನು ಫತ್ವಾ ಹೊರಡಿಸಿದ್ದೇನೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.