ADVERTISEMENT

ಪಶ್ಚಿಮ ಬಂಗಾಳ ಮತದಾನ: ನಂದಿಗ್ರಾಮದಲ್ಲೇ ಬೀಡುಬಿಟ್ಟ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಚುನಾವಣೆ

ಪಿಟಿಐ
Published 1 ಏಪ್ರಿಲ್ 2021, 7:03 IST
Last Updated 1 ಏಪ್ರಿಲ್ 2021, 7:03 IST
ನಂದಿಗ್ರಾಮದಲ್ಲಿ ಗುರುವಾರ ಅಂಗವಿಕಲ ಮತದಾರರೊಬ್ಬರನ್ನು ಮತ ಕೇಂದ್ರಕ್ಕೆ ಕರೆತರಲಾಯಿತು  –ಪಿಟಿಐ ಚಿತ್ರ
ನಂದಿಗ್ರಾಮದಲ್ಲಿ ಗುರುವಾರ ಅಂಗವಿಕಲ ಮತದಾರರೊಬ್ಬರನ್ನು ಮತ ಕೇಂದ್ರಕ್ಕೆ ಕರೆತರಲಾಯಿತು  –ಪಿಟಿಐ ಚಿತ್ರ   

ನಂದಿಗ್ರಾಮ: ಪಶ್ಚಿಮ ಬಂಗಾಳದ ಜಿದ್ದಾಜಿದ್ದಿ ಕ್ಷೇತ್ರವೆಂದೇ ಗುರುತಿಸಲಾಗಿರುವ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ಗುರುವಾರ ಮತದಾನ ಆರಂಭವಾಗಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮತದಾನ ಮುಗಿಯುವವರೆಗೂ ಇಲ್ಲಿನ ರೆಯಾಪುರ ಪ್ರದೇಶದ ಪಕ್ಷದ ಕಾರ್ಯಾಲಯದಲ್ಲೇ ಉಳಿಯಲು ನಿರ್ಧರಿಸಿದ್ದಾರೆ.

ತೀವ್ರ ಕುತೂಹಲ ಕೆರಳಿಸುತ್ತಿರುವ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಗಿದ್ದು, ತಮ್ಮ ಪಕ್ಷದ ಏಜೆಂಟರಿಗೆ ಕೆಲವು ಮತಗಟ್ಟೆಗಳ ಪ್ರವೇಶಕ್ಕೆ ಅವಕಾಶ ನೀಡಿಲ್ಲ ಎಂದು ಟಿಎಂಸಿ ಪಕ್ಷದ ಕಾರ್ಯಕರ್ತರು ದೂರಿದರು. ಈ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿಯವರು ಕ್ಷೇತ್ರದಲ್ಲಿನ ಮತಗಟ್ಟೆ ಕೇಂದ್ರಗಳ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

ಪುರ್ಬಾ ಮೇದಿನಿಪುರ ಜಿಲ್ಲೆಯಲ್ಲಿರುವ ಈ ನಂದಿಗ್ರಾಮ ಕ್ಷೇತ್ರದಲ್ಲಿ ಮತದಾನ ಆರಂಭವಾದ ಎರಡು ಗಂಟೆಗಳಲ್ಲಿ ಶೇ 17ರಷ್ಟು ಮತದಾನವಾಗಿತ್ತು ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಮಾಹಿತಿ ನೀಡಿದರು.

ADVERTISEMENT

ನಂದಿಗ್ರಾಮದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಭಿಮ್ಕತಾ ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಟಿಎಂಸಿ ಕಾರ್ಯಕರ್ತರು ಘೋಷಣೆ ಕೂಗಿರುವ ಪ್ರಕರಣ ಹೊರತುಪಡಿಸಿ, ಕ್ಷೇತ್ರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ವರದಿಯಾಗಿಲ್ಲ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.