ADVERTISEMENT

ಪ್ರಧಾನಿ ಮೋದಿ 2 ದಿನಗಳ ಬಿಹಾರ ಪ್ರವಾಸ; ಅಭಿವೃದ್ಧಿ ಯೋಜನೆಗಳಿಗೆ ಚಾಲನೆ, ರೋಡ್‌ಶೋ

ಪಿಟಿಐ
Published 29 ಮೇ 2025, 4:18 IST
Last Updated 29 ಮೇ 2025, 4:18 IST
<div class="paragraphs"><p>ನರೇಂದ್ರ ಮೋದಿ</p></div>

ನರೇಂದ್ರ ಮೋದಿ

   

(ಪಿಟಿಐ ಚಿತ್ರ)

ಪಟ್ನಾ: ಚುನಾವಣಾ ಹೊಸ್ತಿಲಲ್ಲಿರುವ ಬಿಹಾರಕ್ಕೆ ಎರಡು ದಿನಗಳ ಭೇಟಿ ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ, ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ADVERTISEMENT

ಪ್ರಧಾನಿ ಪ್ರವಾಸದ ವೇಳೆ ರೋಡ್‌ಶೋದಲ್ಲಿ ಭಾಗವಹಿಸಲಿದ್ದು, ಕಾರಾಕಾಟ್‌ನಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಪಟ್ನಾ ವಿಮಾನ ನಿಲ್ದಾಣಕ್ಕೆ ಇಂದು (ಗುರುವಾರ) ಸಂಜೆ ಆಗಮಿಸಲಿರುವ ಪ್ರಧಾನಿ ಮೋದಿ, ಅಲ್ಲಿ ಹೊಸದಾಗಿ ನಿರ್ಮಿಸಲಾದ ಪ್ರಮಾಣಿಕರ ಟರ್ಮಿನಲ್ ಉದ್ಘಾಟಿಸಲಿದ್ದಾರೆ.

ಈ ಟರ್ಮಿನಲ್ ಅನ್ನು ಸುಮಾರು ₹1,200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ವರ್ಷಕ್ಕೆ ಒಂದು ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.

ಬಿಹಟಾ ವಿಮಾನ ನಿಲ್ದಾಣದಲ್ಲಿ ₹1,410 ವೆಚ್ಚದಲ್ಲಿ ನಿರ್ಮಿಸಲಾಗುವ ನೂತನ ನಾಗರಿಕ ಸಂಕೀರ್ಣಕ್ಕೆ ಶಂಕುಸ್ಥಾಪನೆ ನಿರ್ಮಿಸಲಿದ್ದಾರೆ. ಈ ಪ್ರದೇಶ ಐಐಟಿ ಪಟ್ನಾ ಹಾಗೂ ಪ್ರಸ್ತಾವಿತ ಎನ್‌ಐಟಿ ಪಟ್ನಾಗೆ ನೆಲೆಯಾಗಿದ್ದು, ಶೈಕ್ಷಣಿಕ ಕೇಂದ್ರವಾಗಿ ಹೊರಹೊಮ್ಮುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಜೆಪಿಯ ರಾಜ್ಯ ಘಟಕದ ಕಚೇರಿಗೂ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. ಕೊನೆಯದಾಗಿ ಅವರು 2024ರ ಲೋಕಸಭಾ ಚುನಾವಣೆ ವೇಳೆ ಇಲ್ಲಿಗೆ ಆಗಮಿಸಿದ್ದರು.

ಪಾಕಿಸ್ತಾನ ವಿರುದ್ಧದ 'ಆಪರೇಷನ್ ಸಿಂಧೂರ' ಬಳಿಕ ಪ್ರಧಾನಿ ಮೋದಿ ಅವರ ಮೊದಲ ಬಿಹಾರ ಭೇಟಿ ಇದಾಗಿದೆ.

ಶುಕ್ರವಾರದಂದು ರೋಹತಾಸ್‌ನಲ್ಲಿ ಪ್ರಧಾನಿ ಮೋದಿ ₹48,520 ಕೋಟಿ ವೆಚ್ಚದ ಅಭಿವದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ಬಿಹಾರದಲ್ಲಿ ಈ ವರ್ಷಾಂತ್ಯದಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.