ADVERTISEMENT

ಡಿ. 15ರಿಂದ ಜೋರ್ಡಾನ್‌, ಇಥಿಯೋಪಿಯಾ, ಒಮಾನ್‌ಗೆ ಪ್ರಧಾನಿ ಮೋದಿ ಭೇಟಿ

ಪಿಟಿಐ
Published 12 ಡಿಸೆಂಬರ್ 2025, 2:42 IST
Last Updated 12 ಡಿಸೆಂಬರ್ 2025, 2:42 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ </p></div>

ಪ್ರಧಾನಿ ನರೇಂದ್ರ ಮೋದಿ

   

ಪಿಟಿಐ ಚಿತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇದೇ 15ರಿಂದ ನಾಲ್ಕು ದಿನಗಳ ಕಾಲ ಜೋರ್ಡಾನ್, ಇಥಿಯೋಪಿಯಾ, ಒಮಾನ್‌ ದೇಶಗಳಿಗೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ(ಎಂಇಎ) ಶುಕ್ರವಾರ ತಿಳಿಸಿದೆ.

ADVERTISEMENT

ದೊರೆ ಎರಡನೇ ಅಬ್ದುಲ್ಲಾ ಬಿನ್‌ ಅಲ್‌ ಹುಸೇನ್‌ ಅವರ ಆಹ್ವಾನದ ಮೇರೆಗೆ ಮೊದಲಿಗೆ ಜೋರ್ಡಾನ್‌ಗೆ ತೆರಳಲಿರುವ ಮೋದಿ ಅವರು ಡಿ.15ರಿಂದ 16ರವರೆಗೆ ಅಲ್ಲಿ ತಂಗಲಿದ್ದಾರೆ. ಈ ವೇಳೆ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಗಟ್ಟಿಗೊಳಿಸುವ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಎಂಇಎ ತಿಳಿಸಿದೆ.

ಡಿ.16ರಂದು ಪ್ರಧಾನಿ ಜೋರ್ಡಾನ್‌ನಿಂದ ಹೊರಟು ಇಥಿಯೋಪಿಯಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಇದು ಪೂರ್ವ ಆಫ್ರಿಕಾದ ದೇಶಕ್ಕೆ ಅವರ(ಮೋದಿ) ಮೊದಲ ಭೇಟಿಯಾಗಲಿದೆ. ಎರಡು ದಿನಗಳ ಭೇಟಿಯ ವೇಳೆ ಇಥಿಯೋಪಿಯಾ ಪ್ರಧಾನಿ ಅಬಿ ಅಹ್ಮದ್ ಅಲಿ ಅವರೊಂದಿಗೆ ಸಹಕಾರ, ರಕ್ಷಣೆಗೆ ಸಂಬಂಧಪಟ್ಟಂತೆ ಮಾತುಕತೆ ನಡೆಸಲಿದ್ದಾರೆ ಎಂದಿದೆ.

ಪ್ರವಾಸದ ಕೊನೆಯ ಭಾಗವಾಗಿ, ಸುಲ್ತಾನ್ ಹೈಥಮ್ ಬಿನ್ ತಾರಿಕ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅವರು ಡಿಸೆಂಬರ್ 17ರಿಂದ 18 ರವರೆಗೆ ಒಮಾನ್‌ಗೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.