
ಬಿಹಾರದಲ್ಲಿ ಮಂಗಳವಾರ ನಡೆದ ರ‍್ಯಾಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜನರತ್ತ ಕೈಬಿಸಿದರು
–ಪಿಟಿಐ ಚಿತ್ರ
ದರ್ಭಂಗಾ/ ಮೋತಿಹಾರಿ: ‘ಭಾರತದ ಮೇಲೆ ದಾಳಿ ನಡೆಸುವ ಯೋಜನೆಯಿಂದ ಹಿಂದೆ ಸರಿಯಿರಿ. ಹಿಂದಿನ ತಪ್ಪನ್ನು ಪುನರಾವರ್ತಿಸಿದರೆ ಗುಂಡೇಟಿನ ಸುರಿಮಳೆಯನ್ನು ಎದುರಿಸಬೇಕಾಗುತ್ತದೆ’ ಎಂದು ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎಚ್ಚರಿಸಿದರು.
ಬಿಹಾರದಲ್ಲಿ ಮಂಗಳವಾರ ರಾಜಕೀಯ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ರಾಜ್ಯದಲ್ಲಿ ನಿರ್ಮಾಣವಾಗುವ ಡಿಫೆನ್ಸ್ ಕಾರಿಡಾರ್‌ನಲ್ಲಿ ಉತ್ಪಾದಿಸಲಾಗುವ ಸ್ಫೋಟಕಗಳು ಉಗ್ರರ ವಿರುದ್ಧ ಬಳಕೆಯಾಗಲಿವೆ’ ಎಂದು ಹೇಳಿದರು.
‘ಪಾಕಿಸ್ತಾನದ ಉಗ್ರರು ಪಹಲ್ಗಾಮ್‌ನಲ್ಲಿ ನಮ್ಮ ನಾಗರಿಕರ ಮೇಲೆ ದಾಳಿ ನಡೆಸಿದರು. ನಮ್ಮ ತಾಯಂದಿರು ಮತ್ತು ಸಹೋದರಿಯರ ಹಣೆಯ ಮೇಲಿನ ಸಿಂಧೂರವನ್ನು ಅಳಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಡೆಸುವ ಮೂಲಕ 20 ದಿನಗಳ ಒಳಗಾಗಿ ಪ್ರತೀಕಾರದ ಕ್ರಮ ಕೈಗೊಂಡರು. ಭಾರತದ ಸೇನೆಯು ಪಾಕಿಸ್ತಾನದ ನೆಲದಲ್ಲಿ ಉಗ್ರರನ್ನು ಹತ್ತಿಕ್ಕಿತು’ ಎಂದು ಹೇಳಿದರು.
ಶಾ ಹೇಳಿದ್ದು...
* ‘ಜಂಗಲ್ ರಾಜ್’ ಪುನಃ ಅಸ್ತಿತ್ವಕ್ಕೆ ಬರುವುದನ್ನು ತಡೆಯಲು ಕಮಲ ಚಿಹ್ನೆಗೆ ಮತ ಹಾಕಿ
*ಎನ್‌ಡಿಎ ಅಧಿಕಾರಕ್ಕೆ ಬಂದರೆ ಕೃಷಿಗೆ ಕೋಶಿ ನದಿ ನೀರಿನ ಬಳಕೆ ಮತ್ತು ಪ್ರವಾಹ ತಡೆಗಟ್ಟಲು ₹26000 ಕೋಟಿ ಮೀಸಲು
*3.60 ಕೋಟಿ ಜನರಿಗೆ ಗರಿಷ್ಠ ₹5 ಲಕ್ಷದ ವರೆಗೆ ಆರೋಗ್ಯ ವಿಮೆ
*ದರ್ಭಂಗಾದಲ್ಲಿ ಐಟಿ ಪಾರ್ಕ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.