ADVERTISEMENT

ಪಹಲ್ಗಾಮ್‌ ದಾಳಿ | ಭಯೋತ್ಪಾದನೆ ಸಹಿಸಲು ಸಾಧ್ಯವಿಲ್ಲ: ಸ್ಪೀಕರ್‌ ಓಂ ಬಿರ್ಲಾ

ಪಿಟಿಐ
Published 21 ಜುಲೈ 2025, 14:07 IST
Last Updated 21 ಜುಲೈ 2025, 14:07 IST
<div class="paragraphs"><p>ಓಂ ಬಿರ್ಲಾ</p></div>

ಓಂ ಬಿರ್ಲಾ

   

– ಪಿಟಿಐ ಚಿತ್ರ

ನವದೆಹಲಿ: ‘ಭಯೋತ್ಪಾದನೆಯನ್ನು ಸಹಿಸಲು ಸಾಧ್ಯವೇ ಇಲ್ಲ’ ಎಂದು ಲೋಕಸಭೆಯು ಸೋಮವಾರ ಒಕ್ಕೊರಲಿನಿಂದ ಹೇಳಿತು. ಜೊತೆಗೆ ಪಹಲ್ಗಾಮ್‌ ದಾಳಿಯಲ್ಲಿ ಮೃತಪಟ 26 ಮಂದಿಗೆ ಮತ್ತು ಅಹಮದಾಬಾದ್‌ ವಿಮಾನ ದುರಂತದಲ್ಲಿ ಮೃತಪಟ್ಟ 260 ಮಂದಿಗೆ ಸಂತಾಪವನ್ನೂ ಸೂಚಿಸಿತು.

ADVERTISEMENT

ಸ್ಪೀಕರ್‌ ಓಂ ಬಿರ್ಲಾ ಮಾತನಾಡಿ, ‘ಪಹಲ್ಗಾಮ್‌ನಲ್ಲಿ ಏಪ್ರಿಲ್‌ನಲ್ಲಿ ನಡೆದ ಉಗ್ರರ ದಾಳಿಯು ದೇಶ ಮಾತ್ರವಲ್ಲ ಜಗತ್ತಿನ ಆತ್ಮಸಾಕ್ಷಿಯ ಮೇಲೆ ನಡೆದ ದಾಳಿಯಾಗಿದೆ. ಭಯೋತ್ಪಾದನೆಯನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ’ ಎಂದರು. ವಿಮಾನ ದುರಂತದಲ್ಲಿ ಮೃತಪಟ್ಟ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್‌ ರೂಪಾಣಿ ಅವರನ್ನೂ ನೆನಪಿಸಿಕೊಂಡರು.

ದೇಶದ ವಿವಿಧೆಡೆ ಭಾರಿ ಮಳೆ, ಪ್ರವಾಹ, ಭೂಕುಸಿತದಂಥ ವಿಪತ್ತುಗಳಲ್ಲಿ ಮೃತಪಟ್ಟವರಿಗೂ ಲೋಕಸಭೆಯಲ್ಲಿ ಸಂತಾಪ ಸೂಚಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.