ADVERTISEMENT

ಮುಂದುವರಿದ ಉಪಟಳ | ಕಾರ್ಗಿಲ್‌ ಯುದ್ಧದಿಂದ ಪಾಠ ಕಲಿಯದ ಪಾಕಿಸ್ತಾನ

ನಿಲ್ಲದ ಅಮಾಯಕರ ಹತ್ಯೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2019, 2:52 IST
Last Updated 26 ಜುಲೈ 2019, 2:52 IST
   

ಕಾರ್ಗಿಲ್ ಯುದ್ಧದ ನಂತರವೂ ಭಯೋತ್ಪಾದನೆಗೆ ಮತ್ತು ಉಗ್ರರಿಗೆ ಕುಮ್ಮಕ್ಕು ನೀಡುವುದನ್ನು ಪಾಕಿಸ್ತಾನ ನಿಲ್ಲಿಸಲೇ ಇಲ್ಲ. ತಪ್ಪಿನಿಂದ ಪಾಠ ಕಲಿಯದ ಪಾಕಿಸ್ತಾನ ಭಯೋತ್ಪಾದಕರಿಗೆ ನೆರವು ನೀಡುವ ಮೂಲಕ ಭಾರತದಲ್ಲಿ ನೂರಾರು ಅಮಾಯಕರ ಹತ್ಯೆಗೆ ಕಾರಣವಾಗಿದೆ.

ಇದನ್ನೂ ಓದಿ:ಸೈನಿಕರ ‘ಗೃಹ’ಬಲ

2001ರಲ್ಲಿ ಸಂಸತ್‌ ಭವನದ ಮೇಲೆ ನಡೆದ ದಾಳಿ, 2008ರಲ್ಲಿ ನವೆಂಬರ್ 26ರಂದು ಮುಂಬೈನಲ್ಲಿ ನಡೆದ ದಾಳಿ, 2016ರಲ್ಲಿ ಜಮ್ಮು ಮತ್ತು ಕಾಶ್ಮೀರದ ‘ಉರಿ’ ಸೇನಾ ನೆಲೆ ಮೇಲಿನ ದಾಳಿ, ಇತ್ತೀಚೆಗೆ ಪುಲ್ವಾಮಾದಲ್ಲಿ ಯೋಧರ ಮೇಲೆ ನಡೆದ ಉಗ್ರ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಇರುವುದು ದೃಢಪಟ್ಟಿದೆ. ಕಾರ್ಗಿಲ್ ಯುದ್ಧದ ನಂತರ ಈವರೆಗೂ ಭಾರತದಲ್ಲಿ 90ಕ್ಕೂ ಹೆಚ್ಚು ಭಯೋತ್ಪಾದಕ ದಾಳಿಗಳು ನಡೆದಿವೆ. ಈ ಪೈಕಿ ಹೆಚ್ಚಿನವು ಪಾಕಿಸ್ತಾನ ಪ್ರೇರಿತ ಉಗ್ರರಿಂದಲೇ ನಡೆದಿದ್ದು, ಅಂತಹ ಪ್ರಮುಖ ದಾಳಿಗಳ ಮಾಹಿತಿ ಇಲ್ಲಿದೆ.

ADVERTISEMENT

* ಡಿಸೆಂಬರ್ 22, 2000:ದೆಹಲಿಯ ಕೆಂಪುಕೋಟೆ ಮೇಲೆ ನಡೆದ ಉಗ್ರ ದಾಳಿಯಲ್ಲಿ 3 ಜನ ಮೃತಪಟ್ಟು 14 ಮಂದಿಗೆ ಗಾಯ

* ಅಕ್ಟೋಬರ್ 1, 2001:ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಬಳಿ ಕಾರ್‌ ಬಾಂಬ್ ಸ್ಫೋಟ, 38 ಬಲಿ

* ಡಿಸೆಂಬರ್ 13, 2001:ಸಂಸತ್ ಭವನದ ಆವರಣದಲ್ಲಿ ನಡೆದ ಉಗ್ರ ದಾಳಿಯಲ್ಲಿ 7 ಸಾವು, 18 ಜನರಿಗೆ ಗಾಯ

* ಸೆಪ್ಟೆಂಬರ್ 24, 2002:ಗುಜರಾತ್‌ನ ಅಕ್ಷರಧಾಮ ದೇಗುಲದ ಮೇಲೆ ದಾಳಿ– 31 ಬಲಿ, 80 ಮಂದಿಗೆ ಗಾಯ

* ಆಗಸ್ಟ್ 25, 2003:ಮುಂಬೈನಲ್ಲಿ ನಡೆದ ಬಾಂಬ್‌ ಸ್ಫೋಟದಲ್ಲಿ 52 ಜನ ಸಾವು

* ಜುಲೈ 5, 2005:ಅಯೋಧ್ಯೆಯ ರಾಮಜನ್ಮಭೂಮಿ ಪ್ರದೇಶದಲ್ಲಿ ಬಾಂಬ್‌ ದಾಳಿಗೆ 6 ಮಂದಿ ಸಾವು

* ಅಕ್ಟೋಬರ್ 9, 2005:ದೆಹಲಿಯಲ್ಲಿ ಸರಣಿ ಬಾಂಬ್ ಸ್ಫೋಟ– 70 ಸಾವು, 250 ಜನರಿಗೆ ಗಾಯ

* ಜುಲೈ 11, 2006:ಮುಂಬೈ ರೈಲುಗಳಲ್ಲಿ ಸರಣಿ ಸ್ಫೋಟ 209 ಜನ ಮೃತಪಟ್ಟು 714 ಮಂದಿಗೆ ಗಾಯ

* ನವೆಂಬರ್ 26, 2008:ಮುಂಬೈನಲ್ಲಿ ಪಾಕಿಸ್ತಾನ ಮೂಲದ ಉಗ್ರರು ನಡೆಸಿದ ದಾಳಿಗೆ 171 ಜನ ಮೃತಪಟ್ಟು 239 ಜನರಿಗೆ ಗಾಯ

* ಜುಲೈ 13, 2011:ಮುಂಬೈನಲ್ಲಿ ಬಾಂಬ್‌ ಸ್ಫೋಟ, 26 ಸಾವು, 130 ಮಂದಿಗೆ ಗಾಯ

* ಫೆಬ್ರುವರಿ 21, 2013:ಹೈದರಾಬಾದ್‌ನಲ್ಲಿ ಸಂಭವಿಸಿದ ಸ್ಫೋಟದಲ್ಲಿ 18 ಜನ ಮೃತಪಟ್ಟು 131 ಮಂದಿಗೆ ಗಾಯ

* ಜುಲೈ 27, 2015:ಪಂಜಾಬ್‌ನ ಗುರುದಾಸ್‌ಪುರದಲ್ಲಿ ಭಯೋತ್ಪಾದಕ ದಾಳಿ ನಡೆದು 10 ಮಂದಿ ಸಾವು, 15 ಜನರಿಗೆ ಗಾಯ

* ಜನವರಿ 2, 2016:ಪಂಜಾಬ್‌ನ ಪಠಾಣ್‌ಕೋಟ್ ವಾಯುನೆಲೆ ಮೇಲೆ ಉಗ್ರ ದಾಳಿ, 7 ಮಂದಿ ಸಾವು

* 18 ಸೆಪ್ಟೆಂಬರ್, 2016:ಜಮ್ಮು ಮತ್ತು ಕಾಶ್ಮೀರದ ‘ಉರಿ’ ಸೇನಾ ಶಿಬಿರದ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ 23 ಯೋಧರು ಬಲಿಯಾಗಿ 8 ಮಂದಿ ಗಾಯಗೊಂಡಿದ್ದರು. ಇದಕ್ಕೆ ಪ್ರತಿಯಾಗಿ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಪ್ರದೇಶದಲ್ಲಿ ಭಾರತೀಯ ಸೇನೆ ನಿರ್ದಿಷ್ಟ ದಾಳಿ (ಸರ್ಜಿಕಲ್ ಸ್ಟ್ರೈಕ್) ನಡೆಸಿತ್ತು.

* ಜುಲೈ 11, 2017:ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯಲ್ಲಿ ಅಮರನಾಥ ಯಾತ್ರಿಕರ ಮೇಲೆ ಭಯೋತ್ಪಾದಕ ದಾಳಿ, 8 ಯಾತ್ರಿಕರು ಮೃತಪಟ್ಟು 18 ಮಂದಿಗೆ ಗಾಯ

* ಫೆಬ್ರುವರಿ 14, 2019:ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರ ದಾಳಿಗೆ 46 ಬಲಿ. ಇದಕ್ಕೆ ಪ್ರತಿಯಾಗಿ ಭಾರತೀಯ ವಾಯುಪಡೆ ವಿಮಾನಗಳು ಪಾಕಿಸ್ತಾನದ ಗಡಿ ದಾಟಿ ಬಾಲಾಕೋಟ್‌ನಲ್ಲಿರುವ ಉಗ್ರರ ಶಿಬಿರಗಳ ಮೇಲೆ ನಿರ್ದಿಷ್ಟ ದಾಳಿ (ಸರ್ಜಿಕಲ್ ಸ್ಟ್ರೈಕ್) ನಡೆಸಿವೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.