ADVERTISEMENT

ಪಟ್ನಾ–ದೆಹಲಿ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ: ಪ್ರಯಾಣಿಕನ ಬಂಧನ

ಪಿಟಿಐ
Published 22 ಜುಲೈ 2022, 2:43 IST
Last Updated 22 ಜುಲೈ 2022, 2:43 IST
   

ನವದೆಹಲಿ: ಪಟ್ನಾದಿಂದ ದೆಹಲಿಗೆ ತೆರಳಬೇಕಿದ್ದ ಇಂಡಿಗೋ ವಿಮಾನದಲ್ಲಿ ಬಾಂಬ್ ಇದೆ ಎಂದು ವ್ಯಕ್ತಿಯೋರ್ವ ಹೇಳಿದ್ದರಿಂದ ಕ್ಷಣಕಾಲ ಪಟ್ನಾ ವಿಮಾನ ನಿಲ್ದಾಣದಲ್ಲಿ ಗೊಂದಲ ಉಂಟಾಗಿದೆ.

ಗುರುವಾರ ರಾತ್ರಿ 8.20ಕ್ಕೆ ಹೊರಡಬೇಕಿದ್ದ ವಿಮಾನದಲ್ಲಿ ಬಾಂಬ್ ಇರಿಸಿರುವ ಬೆದರಿಕೆ ಕರೆ ಬಂದ ಬಳಿಕ ಸಂಪೂರ್ಣವಾಗಿ ತಪಾಸಣೆ ಮಾಡಲಾಗಿದೆ.

ಆದರೆ ಅದೊಂದು ಹುಸಿ ಬಾಂಬ್ ಕರೆ ಎಂದು ತನಿಖೆಯ ಬಳಿಕ ಪತ್ತೆಯಾಗಿದೆ.

ADVERTISEMENT

ಬಾಂಬ್ ಬೆದರಿಕೆ ಬಂದ ಕೂಡಲೇ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಿ, ತಪಾಸಣೆ ನಡೆಸಲಾಗಿದೆ.

ಹುಸಿ ಕರೆ ಎಂದು ಗೊತ್ತಾದ ಬಳಿಕ, ಬಾಂಬ್ ಬೆದರಿಕೆ ಒಡ್ಡಿದ್ದ ಪ್ರಯಾಣಿಕನನ್ನು ಸ್ಥಳೀಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಮಾನ ಸಂಚಾರವನ್ನು ರದ್ದುಪಡಿಸಿದ್ದು, ಶುಕ್ರವಾರ ಬೆಳಗ್ಗೆ ದೆಹಲಿಗೆ ತೆರಳಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.