ADVERTISEMENT

ಬಿಹಾರದ ಜನರ ವಿರುದ್ಧ ಜ್ಞಾನೇಶ್ ಕುಮಾರ್ ಮುನ್ನಡೆ ಸಾಧಿಸಿದ್ದಾರೆ: ಪವನ್ ಖೇರಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ನವೆಂಬರ್ 2025, 6:34 IST
Last Updated 14 ನವೆಂಬರ್ 2025, 6:34 IST
<div class="paragraphs"><p>ಪವನ್ ಖೇರಾ</p></div>

ಪವನ್ ಖೇರಾ

   

ನವದೆಹಲಿ: ‘ಪ್ರಾಥಮಿಕ ಟ್ರೆಂಡ್ ಪ್ರಕಾರ ಬಿಹಾರದ ಜನರಿಗಿಂತ ಜ್ಞಾನೇಶ್ ಕುಮಾರ್ ಮುನ್ನಡೆ ಸಾಧಿಸಿದ್ದಾರೆ’ ಎಂದು ಕಾಂಗ್ರೆಸ್‌ ನಾಯಕ ಪವನ್ ಖೇರಾ ವ್ಯಂಗ್ಯ ಮಾಡಿದ್ದಾರೆ.

ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿರುವ ವಿಡಿಯೊ ‘ಎಎನ್‌ಐ’ ಸುದ್ದಿ ಸಂಸ್ಥೆ ‘ಎಕ್ಸ್’ನಲ್ಲಿ ಹಂಚಿಕೊಂಡಿದೆ.

ADVERTISEMENT

‘ಇದು ಕಾಂಗ್ರೆಸ್, ಬಿಜೆಪಿ, ಆರ್‌ಜೆಡಿ ಹಾಗೂ ಜೆಡಿಯು ನಡುವಿನ ಹೋರಾಟವಲ್ಲ. ಇದು ಭಾರತದ ನಾಗರಿಕರು ಹಾಗೂ ಜ್ಞಾನೇಶ್ ಕುಮಾರ್ ನಡುವೆ ನಡೆಯುತ್ತಿರುವ ನೇರ ಹೋರಾಟ. ಯಾರು ಗೆಲ್ಲುತ್ತಾರೋ ನೋಡೋಣ’ ಎಂದು ಹೇಳಿದ್ದಾರೆ.

‘ಬಿಹಾರದ ಜನರನ್ನು ಕಡಿಮೆ ಅಂದಾಜು ಮಾಡಲಾಗುವುದಿಲ್ಲ. ಅವರು ಧೈರ್ಯ ತೋರಿಸಿದ್ದಾರೆ. ಎಸ್‌ಐಆರ್ ಹೊರತಾಗಿಯೂ ಅವರು ದಿಟ್ಟತನ ಪ್ರದರ್ಶಿಸಿದ್ದಾರೆ. ಜ್ಞಾನೇಶ್ ಕುಮಾರ್ ಎಷ್ಟು ಪರಿಣಾಮಕಾರಿಯಾಗಿದ್ದಾರೆ ಎನ್ನುವುದನ್ನು ಮುಂದೆ ತಿಳಿಯಲಿದೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.