ಕಾಶ್ಮೀರದಲ್ಲಿ ತಾಪಮಾನ ಕುಸಿದಿದ್ದು ರಸ್ತೆಗಳಲ್ಲಿ ಆವರಿಸಿರುವ ದಟ್ಟ ಹಿಮದಲ್ಲಿ ಚಿಣ್ಣರ ಆಟೋಟ
ರಾಯಿಟರ್ಸ್ ಚಿತ್ರ
ಕಾಶ್ಮೀರದಲ್ಲಿ ಮಂಜು ಸುರಿಯುತ್ತಿದ್ದು ರಸ್ತೆ, ವಾಹನ, ಕೆರೆಗಳಲ್ಲಿ ದಟ್ಟ ಮಂಜು ಆವರಿಸಿದೆ
ಹಿಮಪಾತದಿಂದಾಗಿ ಅಲ್ಲಿನ ಜನಜೀವನ ಅಸ್ತವ್ಯಸ್ಥಗೊಂಡಿದ್ದು, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಪರಿಸ್ಥಿತಿ ಅವಲೋಕಿಸಿ, ಪರಿಹಾರ ಕಾರ್ಯ ಚುರುಕುಗೊಳಿಸುವಂತೆ ಜಿಲ್ಲಾಡಳಿತಗಳಿಗೆ ನಿರ್ದೇಶಿಸಿದ್ದಾರೆ
ಆಸ್ಪತ್ರೆಗಳಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಹಾಗೂ ಭೇಟಿ ನೀಡುವವರಿಗೆ ತ್ವರಿತ ದಾಖಲಾತಿ ಹಾಗೂ ಚಿಕಿತ್ಸೆ ನೀಡಲು ಸಿಬ್ಬಂದಿ ಸದಾ ಸಿದ್ಧವಿರುವಂತೆಯೂ ಆರೋಗ್ಯ ಇಲಾಖೆಗೆ ಸೂಚಿಸಿದ್ದಾರೆ
ಕೇಂದ್ರಾಡಳಿತ ಪ್ರದೇಶದಲ್ಲಿ ತಾಪಮಾನ ಕುಸಿಯುತ್ತಿದ್ದು, ವಿದ್ಯುತ್ ಪೂರೈಕೆ ಹಾಗೂ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ಈ ನಿಟ್ಟಿನಲ್ಲಿ ಜನರಿಗೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವಿಳಂಬವಾಗದಂತೆ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಸೂಚಿಸಿದ್ದಾರೆ
ದಟ್ಟ ಹಿಮ ಆವರಿಸಿರುವ ಪ್ರದೇಶಗಳಲ್ಲಿ ಗಿಡ, ಮರ, ರಸ್ತೆ ಎಲ್ಲವೂ ಶ್ವೇತ ವರ್ಣಕ್ಕೆ ತಿರುಗಿವೆ
ದಟ್ಟ ಹಿಮ ಆವರಿಸಿರುವ ಹಾದಿಯಲ್ಲಿ ಮಂದ ಬೆಳಕಿನಲ್ಲಿ ಸಾಗುತ್ತಿರುವ ವಾಹನಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.