ADVERTISEMENT

ಕರ್ತಾರ್‌ಪುರ ಗುರುದ್ವಾರಕ್ಕೆ ಭೇಟಿ ನೀಡುವ ಯಾತ್ರಿಕರ ಸಂಖ್ಯೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2019, 2:57 IST
Last Updated 18 ನವೆಂಬರ್ 2019, 2:57 IST
ಕರ್ತಾರ್‌ಪುರ ಸಾಹಿಬ್ ಗುರುದ್ವಾರ
ಕರ್ತಾರ್‌ಪುರ ಸಾಹಿಬ್ ಗುರುದ್ವಾರ   

ನವದೆಹಲಿ: ಕರ್ತಾರ್‌ಪುರಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡುವ ಯಾತ್ರಿಕರ ಸಂಖ್ಯೆ ಹೆಚ್ಚಳವಾಗಿದೆ. ಪಾಕಿಸ್ತಾನದ ಗಡಿಪ್ರದೇಶದಿಂದ ಇಲ್ಲಿಗೆ ಆಗಮಿಸುತ್ತಿರುವ ಯಾತ್ರಿಕರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ.

ನವೆಂಬರ್ 24 ಭಾನುವಾರದಂದು ಸರಿಸುಮಾರು 1,800 ಮಂದಿ ಗಡಿ ದಾಟಿ ಕರ್ತಾರ್‌ಪುರಕ್ಕೆ ಬರಲಿದ್ದಾರೆ ಎಂದು ಇಲ್ಲಿನ ಜನರು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ನವೆಂಬರ್ 17ರಂದು 671 ಮಂದಿ ಕರ್ತಾರ್‌ಪುರಕ್ಕೆ ಭೇಟಿ ನೀಡಿದ್ದರು. ಆದರೆ ಮುಂದಿನ ವಾರ ಇದರ ಮೂರು ಪಟ್ಟು ಯಾತ್ರಿಕರು ಬರಲಿದ್ದಾರೆ ಎಂದಿದ್ದಾರೆ ಅಲ್ಲಿನ ಬೆಳವಣಿಗೆಗಳ ಬಗ್ಗೆ ಮಾಹಿತಿಯಿರುವ ಜನರು.

ಸರ್ಕಾರಿ ಅಂಕಿಅಂಶಗಳ ಪ್ರಕಾರ ಸಿಖ್ ಧಾರ್ಮಿಕ ಹಬ್ಬ ಮತ್ತು ವಾರಾಂತ್ಯಗಳಲ್ಲಿ ಯಾತ್ರಿಕರ ಸಂಖ್ಯೆ ಜಾಸ್ತಿಯಾಗುತ್ತಿದೆ. ನವೆಂಬರ್ 9ರಂದು ಕಾರಿಡಾರ್ ಉದ್ಘಾಟನೆಯಾದಾಗ 562 ಭಾರತೀಯರು ಇಲ್ಲಿ ಭೇಟಿ ನೀಡಿದ್ದರು.

ಅದೇ ವೇಳೆ ಗುರುನಾನಕ್ ಅವರ 550ನೇ ಜಯಂತಿ ಆಚರಣೆಯಾದ ನವೆಂಬರ್ 12ರಂದು ಭಾರತದಿಂದ 546 ಮಂದಿ ಇಲ್ಲಿಗೆ ಆಗಮಿಸಿದ್ದರು.

ಅಂಕಿ ಅಂಶಗಳ ಪ್ರಕಾರ ನವೆಂಬರ್ 10 ಭಾನುವಾರ ಇಲ್ಲಿಗೆ229 ಮಂದಿ ಭೇಟಿ ನೀಡಿದ್ದು ನವೆಂಬರ್ 11ರಂದು 122, ನವೆಂಬರ್ 13ರಂದು 279, ನವೆಂಬರ್ 14ರಂದು 241, ನವೆಂಬರ್ 15ರಂದು 161 ಮತ್ತು ನವೆಂಬರ್ 16ರಂದು 40 ಮಂದಿ ಭೇಟಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.