ಅಹಮದಾಬಾದ್‌ನಲ್ಲಿ ಪತನಗೊಂಡ ಏರ್ ಇಂಡಿಯಾ ವಿಮಾನದ ಅವಶೇಷಗಳನ್ನು ಸ್ಥಳದಿಂದ ತೆರವು ಮಾಡುವ ಕಾರ್ಯಾಚರಣೆಯನ್ನು ಶನಿವಾರ ನಡೆಸಲಾಯಿತು
– ಪಿಟಿಐ ಚಿತ್ರ
ಅಹಮದಾಬಾದ್: ‘ಲಂಡನ್‌ನಲ್ಲಿದ್ದ ಮಗ, ಸೊಸೆ ಎರಡು ವರ್ಷಗಳ ಬಳಿಕ ನನಗೆ ಹೇಳದೇ ಭಾರತಕ್ಕೆ ಬಂದು ಅಚ್ಚರಿ ನೀಡಿದ್ದರು. ನನ್ನೊಂದಿಗೆ ಸಂತಸದಿಂದ ಕಾಲ ಕಳೆದ ಬಳಿಕ ಮತ್ತೆ ಹಿಂದಿರುಗುತ್ತಿದ್ದ ಅವರನ್ನು ವಿಮಾನ ನಿಲ್ದಾಣದಲ್ಲಿ ಗುರುವಾರ ಬಿಟ್ಟು ಬಂದೆ. ತಕ್ಷಣವೇ ಅವರಿದ್ದ ವಿಮಾನ ಪತನಗೊಂಡ ಸುದ್ದಿ ತಿಳಿಯಿತು’ ವಿಮಾನ ದುರಂತದಲ್ಲಿ ಮಗ –ಸೊಸೆಯನ್ನು ಕಳೆದುಕೊಂಡಿರುವ ಅನೀಲ್ ಪಟೇಲ್, ತಮ್ಮ ನೋವು ತೋಡಿಕೊಂಡಿದ್ದು ಹೀಗೆ.
ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಪತನ ದುರಂತದಲ್ಲಿ ಪಟೇಲ್ ಅವರ ಪುತ್ರ ಹರ್ಷಿತ್ ಹಾಗೂ ಅವರ ಪತ್ನಿ ಪೂಜಾ ಸಾವಿಗೀಡಾಗಿದ್ದಾರೆ. ಡಿಎನ್‌ಎ ಮಾದರಿ ನೀಡಿರುವ ಪಟೇಲ್ ಆಸ್ಪತ್ರೆಯಲ್ಲಿ ಮಗ– ಸೊಸೆಯ ಶವಗಳ ಹಸ್ತಾಂತರಕ್ಕೆ ಕಾಯುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.