ADVERTISEMENT

ತಿರುಪತಿಯಲ್ಲಿ ರಾಜಕೀಯ, ದ್ವೇಷ ಭಾಷಣಗಳಿಗೆ ನಿಷೇಧ ಹೇರಿದ ಟಿಟಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ನವೆಂಬರ್ 2024, 9:21 IST
Last Updated 30 ನವೆಂಬರ್ 2024, 9:21 IST
<div class="paragraphs"><p><strong>ತಿರುಪತಿ</strong></p></div>

ತಿರುಪತಿ

   

-ಪಿಟಿಐ ಚಿತ್ರ

ಹೈದರಾಬಾದ್‌: ತಿರುಮಲದ ಪಾವಿತ್ರ್ಯತೆ ಮತ್ತು ಆಧ್ಯಾತ್ಮಿಕ ಶಾಂತಿ ಕಾಪಾಡಲು ತಿರುಮಲದಲ್ಲಿ ರಾಜಕೀಯ ಹಾಗೂ ದ್ವೇಷದ ಭಾಷಣಗಳಿಗೆ ಟಿಟಿಡಿ ನಿಷೇಧ ಹೇರಿದೆ.

ADVERTISEMENT

ಸದಾ ಗೋವಿಂದಾ ನಾಮಸ್ಮರಣೆ ಮೊಳಗುವ ಪವಿತ್ರ ತಿರುಮಲ ದೈವಸ್ಥಾನದಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲವು ವ್ಯಕ್ತಿಗಳು ಹಾಗೂ ರಾಜಕೀಯ ಮುಖಂಡರು ತಿರುಮಲ ದೇವಸ್ಥಾನದ ದರ್ಶನದ ನಂತರ ದೇವಸ್ಥಾನದ ಎದುರು ಮಾಧ್ಯಮಗಳ ಮುಂದೆ ರಾಜಕೀಯ ದ್ವೇಷದ ಹೇಳಿಕೆ ನೀಡಿ ಆಧ್ಯಾತ್ಮಿಕ ವಾತಾವರಣವನ್ನು ಕದಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಿಷೇಧ ಹೇರುವ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಟಿಟಿಡಿ ಮಂಡಳಿ ಹೇಳಿದೆ. 

ಟಿಟಿಡಿ ಕೂಡ ತನ್ನ ನಿರ್ಧಾರಕ್ಕೆ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದೆ. ಇದನ್ನು ಉಲ್ಲಂಘಿಸುವವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅದು ತಿಳಿಸಿದೆ.

ಡಿ.3ರಂದು ದೇವರ ದರ್ಶನ: ತಿರುಮಲದಲ್ಲಿ ಡಿ.3ರಂದು ಸ್ಥಳೀಯರಿಗೆ ವೆಂಕಟೇಶ್ವರ ಸ್ವಾಮಿ ದರ್ಶನ ವ್ಯವಸ್ಥೆ ಮಾಡಲು ಟಿಟಿಡಿ ಇದೇ ವೇಳೆ ನಿರ್ಧರಿಸಿದೆ.

ತಿರುಪತಿಯ ಮಹತಿ ಆಡಿಟೋರಿಯಂ ಮತ್ತು ತಿರುಮಲದ ಸಮುದಾಯ ಭವನದಲ್ಲಿ ಡಿ.2 ರಂದು ಬೆಳಿಗ್ಗೆ 5 ಗಂಟೆಗೆ ಟೋಕನ್ ವಿತರಿಸಲಾಗುವುದು.

ನವೆಂಬರ್ 18 ರಂದು ನಡೆದ ಟಿಟಿಡಿ ಟ್ರಸ್ಟಿಗಳ ಮಂಡಳಿಯು ತನ್ನ ಮೊದಲ ಸಭೆಯಲ್ಲಿ ಪ್ರತಿ ತಿಂಗಳ ಮೊದಲ ಮಂಗಳವಾರದಂದು ಸ್ಥಳೀಯರಿಗೆ ಶ್ರೀವಾರಿ ದರ್ಶನವನ್ನು ನೀಡಲು ನಿರ್ಧರಿಸಿತು. ಈ ಹಿನ್ನೆಲೆಯಲ್ಲಿ ಡಿಸೆಂಬರ್ 3ರಂದು ಸ್ಥಳೀಯರಿಗೆ ದರ್ಶನ ನೀಡಲು ಟಿಟಿಡಿ ವ್ಯವಸ್ಥೆ ಮಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.