ADVERTISEMENT

ಉಚಚುನಾವಣೆಯಲ್ಲಿ ಮುಖಭಂಗ: ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ರಾಜೀನಾಮೆ

ಪಿಟಿಐ
Published 23 ಜೂನ್ 2025, 13:36 IST
Last Updated 23 ಜೂನ್ 2025, 13:36 IST
   

ಅಹಮದಾಬಾದ್‌: ಕಾಡಿ ಹಾಗೂ ವಿಸಾವದರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಪಕ್ಷ ಅನುಭವಿಸಿರುವ ಸೋಲಿಗೆ ನೈತಿಕ ಹೊಣೆ ಹೊತ್ತಿರುವ ಗುಜರಾತ್‌ ಕಾಂಗ್ರೆಸ್‌ ಅಧ್ಯಕ್ಷ ಶಕ್ತಿಸಿನ್ಹ ಗೋಹಿಲ್‌ ಅವರು ತಮ್ಮ ಸ್ಥಾನಕ್ಕೆ ಇಂದು (ಸೋಮವಾರ, ಜೂನ್‌ 23) ರಾಜೀನಾಮೆ ನೀಡಿದ್ದಾರೆ.

ವಿಸಾವದರ ಕ್ಷೇತ್ರದಲ್ಲಿ ಆಮ್‌ ಆದ್ಮಿ ಪಕ್ಷದ (ಎಎಪಿ) ಅಭ್ಯರ್ಥಿ ಗೋಪಾಲ್‌ ಇಟಾಲಿಯಾ ಮತ್ತು ಕಾಡಿಯಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಂದ್ರ ಚವ್ಡಾ ಜಯ ಸಾಧಿಸಿದ್ದಾರೆ. ಈ ಕ್ಷೇತ್ರಗಳಲ್ಲಿ ಕ್ರಮವಾಗಿ ನಿತಿನ್‌ ರಂಪಾರಿಯಾ ಹಾಗೂ ರಮೇಶ್‌ಭಾಯ್‌ ಚವ್ಡಾ ಅವರು ಕಾಂಗ್ರೆಸ್‌ ಅಭ್ಯರ್ಥಿಗಳಾಗಿದ್ದರು.

ಈ ಎರಡು ಕ್ಷೇತ್ರಗಳಿಗೆ ಜೂನ್‌ 19ರಂದು ಮತದಾನ ನಡೆದಿತ್ತು. ಇಂದು ಫಲಿತಾಂಶ ಪ್ರಕಟವಾಗಿದೆ.

ADVERTISEMENT

ಸೋಲಿನ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿರುವ ಗೋಹಿಲ್‌, 'ಉಪಚುನಾವಣೆ ಫಲಿತಾಂಶಗಳು ನಾವು ನಿರೀಕ್ಷಿಸಿದಂತೆ ಬಂದಿಲ್ಲ. ಹಾಗಾಗಿ, ಪಕ್ಷದ ಸೋಲಿಗೆ ನೈತಿಕ ಹೊಣೆಯನ್ನು ನಾನೇ ಹೊರುತ್ತೇನೆ. ಗುಜರಾತ್‌ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ರಾಜೀನಾಮೆ ಪತ್ರವನ್ನು ನಮ್ಮ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈಗಾಗಲೇ ಮೇಲ್‌ ಮೂಲಕ ಕಳುಹಿಸಿದ್ದೇನೆ' ಎಂದು ತಿಳಿಸಿದ್ದಾರೆ.

ರಾಜ್ಯಸಭಾ ಸದಸ್ಯರಾಗಿರುವ ಗೋಹಿಲ್‌ ಅವರನ್ನು, 2024ರ ಸಾರ್ವತ್ರಿಕ ಚುನಾವಣೆಗೂ ಮೊದಲೇ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ (2023ರ ಜೂನ್‌ನಲ್ಲಿ) ನೇಮಿಸಲಾಗಿತ್ತು.

ಕಾಡಿ ಕ್ಷೇತ್ರದ ಫಲಿತಾಂಶ
ವಿಸಾವದರ ಕ್ಷೇತ್ರದ ಫಲಿತಾಂಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.