ADVERTISEMENT

ಟ್ರಕ್‌ ಸಹಾಯಕನ ಅಪಹರಣ ಪ್ರಕರಣ: ಪೂಜಾ ಖೇಡ್ಕರ್‌ ತಂದೆಯ ಕಾರು ಚಾಲಕ ಬಂಧನ

ಪಿಟಿಐ
Published 20 ಸೆಪ್ಟೆಂಬರ್ 2025, 15:16 IST
Last Updated 20 ಸೆಪ್ಟೆಂಬರ್ 2025, 15:16 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಠಾಣೆ: ಟ್ರಕ್‌ ಸಹಾಯಕನನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಐಎಎಸ್ ಪ್ರೊಬೇಷನರಿ ಅಧಿಕಾರಿ ಪೂಜಾ ಖೇಡ್ಕರ್ ಅವರ ತಂದೆಯ ಕಾರು ಚಾಲಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. 

ADVERTISEMENT

ಬಂಧಿತ ಆರೋಪಿ ಪ್ರಫುಲ್‌ ಸಾಳುಂಖೆ ಎಂಬಾತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪೀಠವು ಸೆ.23ರವರೆಗೆ ಆತನನ್ನು ಪೊಲೀಸ್‌ ವಶಕ್ಕೆ ನೀಡಿ ಆದೇಶ ಹೊರಡಿಸಿದೆ.

ಪ್ರಕರಣದಲ್ಲಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ ದಿಲೀಪ್‌ ಖೇಡ್ಕರ್‌, ಮನೋರಮಾ (ಪೂಜಾ ತಂದೆ, ತಾಯಿ) ಹಾಗೂ ಇನ್ನೊಬ್ಬ ವ್ಯಕ್ತಿ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.  

ಮುಂಬೈನ ಸ್ಯಾಟಲೈಟ್‌ ಟೌನ್‌ಶಿಪ್‌ನ ಮುಳುಂದ್‌– ಐರೋಲಿ ರಸ್ತೆಯಲ್ಲಿ ಸೆ.13ರಂದು ಟ್ರಕ್‌ವೊಂದು ಎಸ್‌ಯುವಿ ಕಾರಿಗೆ ಸಣ್ಣ ಪ್ರಮಾಣದಲ್ಲಿ ಡಿಕ್ಕಿಯಾಗಿತ್ತು.  ಟ್ರಕ್‌ನಲ್ಲಿ ಚಾಲಕ ಚಾಂದ್‌ಕುಮಾರ್‌ ಚವಾಣ್‌ ಅವರೊಂದಿಗೆ ಪ್ರಹ್ಲಾದ್‌ ಕುಮಾರ್‌ (22) ಇದ್ದರು.

ನಷ್ಟ ಪರಿಹಾರ ನೀಡುವಂತೆ ದಿಲೀಪ್‌ ಹಾಗೂ ಇನ್ನಿಬ್ಬರು ಚಾಂದ್‌ಕುಮಾರ್‌ ಹಾಗೂ ಪ್ರಹ್ಲಾದ್‌ಗೆ ಬೇಡಿಕೆ ಇಟ್ಟಿದ್ದರು. ಈ ವೇಳೆ ಗಲಾಟೆ ನಡೆಯಿತು. ಬಳಿಕ  ಪೊಲೀಸ್‌ ಠಾಣೆಗೆ ಹೋಗುವ ನೆಪದಲ್ಲಿ ಕುಮಾರ್‌ ಅವರನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದಿದ್ದರು. 

ಪ್ರಹ್ಲಾದ್‌ ಅವರನ್ನು ಪೂಜಾ ಖೇಡ್ಕರ್ ಅವರ ಪುಣೆಯ ನಿವಾಸದಲ್ಲಿ ಪೊಲೀಸರು ರಕ್ಷಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.