ವಿಶ್ವಸಂಸ್ಥೆ: ಕಾಶ್ಮೀರದ ವಿಚಾರದಲ್ಲಿ ಭಾರತ ಸರ್ಕಾರದ ನಿಲುವಿಗೆ ಪರವಾಗಿ ನಿಂತ ನಟಿ ಪ್ರಿಯಾಂಕಾ ಚೋಪ್ರಾ ಅವರನ್ನು, ಯುನಿಸೆಫ್ ಗುಡ್‌ವಿಲ್ ರಾಯಭಾರಿ ಹುದ್ದೆಯಿಂದ ವಜಾಗೊಳಿಸಬೇಕು ಎನ್ನುವ ಪಾಕಿಸ್ತಾನದ ಆಗ್ರಹವನ್ನು ವಿಶ್ವಸಂಸ್ಥೆ ಪರೋಕ್ಷವಾಗಿ ತಿರಸ್ಕರಿಸಿದೆ.
‘ಪ್ರಿಯಾಂಕಾ ಅಥವಾ ಇನ್ಯಾವ ಗುಡ್‌ವಿಲ್ ರಾಯಭಾರಿಯೇ ಆಗಿರಲಿ, ಯುನಿಸೆಫ್ ಅಥವಾ ಇನ್ಯಾವುದೇ ಸಂಸ್ಥೆಯ ಪರವಾಗಿ ಮಾತನಾಡುವಾಗ ನಿಷ್ಪಕ್ಷಪಾತವಾದ ನಿಲುವು ತೆಗೆದುಕೊಳ್ಳಬೇಕು. ಆದರೆ ವೈಯಕ್ತಿಕವಾಗಿ ಅವರ ಆಸಕ್ತಿಗೆ ಸಂಬಂಧಿಸಿದ ವಿಷಯಗಳ ಬಗ್ಗೆಸ್ವಂತ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕು ಅವರಿಗಿದೆ’ ಎಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.