ADVERTISEMENT

ಪ್ರಿಯಾಂಕಾ ಕೆನ್ನೆಯಂತಹ ರಸ್ತೆ: BJP ನಾಯಕನ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು

ಶಮಿನ್‌ ಜಾಯ್‌
Published 8 ಜನವರಿ 2025, 13:12 IST
Last Updated 8 ಜನವರಿ 2025, 13:12 IST
<div class="paragraphs"><p>ಪ್ರಿಯಾಂಕಾ ಗಾಂಧಿ ಮತ್ತು&nbsp;ರಮೇಶ್ ಬಿಧೂರಿ</p></div>

ಪ್ರಿಯಾಂಕಾ ಗಾಂಧಿ ಮತ್ತು ರಮೇಶ್ ಬಿಧೂರಿ

   

Credit: PTI/X

ನವದೆಹಲಿ: ಮುಂಬರುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ತಾವು ಗೆದ್ದರೆ, ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಕೆನ್ನೆಯಂತಹ ನುಣುಪಾದ ರಸ್ತೆಗಳನ್ನು ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ನಿರ್ಮಿಸುವುದಾಗಿ ಕಲ್ಕಾಜಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧೂರಿ ಅವರು ನೀಡಿರುವ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ.

ADVERTISEMENT

ರಮೇಶ್ ಬಿಧೂರಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಪ್ರಿಯಾಂಕಾ ಗಾಂಧಿ, ‘ಬಿಜೆಪಿ ಅಭ್ಯರ್ಥಿ ರಮೇಶ್ ಬಿಧೂರಿ ಅವರ ವಿವಾದಾತ್ಮಕ ಹೇಳಿಕೆ ‘ಹಾಸ್ಯಾಸ್ಪದ’ವಾಗಿದೆ. ದೆಹಲಿ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಗಂಭೀರವಾದ ವಿಷಯಗಳನ್ನು ಚರ್ಚಿಸಬೇಕೇ ಹೊರತು ‘ಅಪ್ರಸ್ತುತ’ ವಿಷಯಗಳಲ್ಲ’ ಎಂದು ತಿರುಗೇಟು ನೀಡಿದ್ದಾರೆ.

‘ರಮೇಶ್ ಬಿಧೂರಿ ಅವರು ಎಂದಿಗೂ ತಮ್ಮ ಕೆನ್ನೆಗಳ ಬಗ್ಗೆ ಮಾತನಾಡಿದವರಲ್ಲ. ಇದೆಲ್ಲವೂ ಅಪ್ರಸ್ತುತವಾಗಿದೆ. ದೆಹಲಿ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ನಾವು ದೆಹಲಿಯ ಜನರ ಪ್ರಮುಖ ಸಮಸ್ಯೆಗಳ ಬಗ್ಗೆ ಮಾತನಾಡಬೇಕೇ ಹೊರತು ಅನಗತ್ಯ ವಿಚಾರಗಳ ಬಗ್ಗೆ ಅಲ್ಲ’ ಎಂದು ಪ್ರಿಯಾಂಕಾ ಹೇಳಿದ್ದಾರೆ.

ರಮೇಶ್ ಬಿಧೂರಿ ಸ್ಪಷ್ಟನೆ: ತಮ್ಮ ಹೇಳಿಕೆಯಲ್ಲಿ ಅಪಾರ್ಥಕ್ಕೆ ಕಲ್ಪಿಸುವ ಅಂಶಗಳಿಲ್ಲ ಎಂದು ಸ್ಪಷ್ಟನೆ ನೀಡಲು ಪ್ರಯತ್ನಿಸಿರುವ ರಮೇಶ್ ಬಿಧೂರಿ, ಈ ಹಿಂದೆ ಲಾಲು ಪ್ರಸಾದ್ ಯಾದವ್ ಅವರು ಹೇಮಾ ಮಾಲಿನಿ ಅವರ ಕೆನ್ನೆಯಷ್ಟು ಮೃದುವಾದ ರಸ್ತೆಗಳನ್ನು ಬಿಹಾರದಲ್ಲಿ ನಿರ್ಮಿಸುವುದಾಗಿ ಹೇಳಿದ್ದನ್ನು ಉಲ್ಲೇಖಿಸುವ ಮೂಲಕ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.