ADVERTISEMENT

ಕಮಲ್‌ನಾಥ್‌ ಕಾಂಗ್ರೆಸ್ ತೊರೆಯುವ ಊಹಾಪೋಹ: ಸಂಜಯ್ ರಾವುತ್‌ ಹೇಳಿದ್ದು ಹೀಗೆ

ಪಿಟಿಐ
Published 18 ಫೆಬ್ರುವರಿ 2024, 5:30 IST
Last Updated 18 ಫೆಬ್ರುವರಿ 2024, 5:30 IST
ಸಂಜಯ್ ರಾವುತ್‌
ಸಂಜಯ್ ರಾವುತ್‌   

ಮುಂಬೈ: ಹಿರಿಯ ನಾಯಕ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್‌ ಅವರು ಕಾಂಗ್ರೆಸ್ ತೊರೆಯಲಿದ್ದಾರೆ ಎನ್ನುವ ಊಹಾಪೋಹಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿವಸೇನಾದ (ಯುಟಿಬಿ) ನಾಯಕ ಸಂಜಯ್ ರಾವುತ್‌, ‘ನಮ್ಮ ಶಿವಸೇನಾದಿಂದ ಹಾಗೂ ಎನ್‌ಸಿಪಿಯಿಂದ ಅಜಿತ್‌ ಪವಾರ್‌ ಅವರೇ ಬಿಟ್ಟು ಹೋದರು. ಏನಾಯಿತು’ ಎಂದು ಪ್ರಶ್ನಿಸಿದ್ದಾರೆ.

‘ಇವರಿಗೆಲ್ಲಾ ನಿಷ್ಠೆ ಇಲ್ಲ, ಹೇಡಿಗಳು. ಇ.ಡಿ. ಭಯದಿಂದ ಪಕ್ಷ ತೊರೆದಿದ್ದಾರೆ’ ಎಂದು ಹೇಳಿದ್ದಾರೆ.

‘ಮಧ್ಯಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಲು ಸಾಧ್ಯವೇ ಇಲ್ಲ ಎಂದು ಜನ ಹೇಳಿದ್ದರು. ಆದರೆ ಕಮಲ್‌ನಾಥ್‌ ಅವರಂತವರು ಚುನಾವಣೆಯನ್ನು ಹಾಳು ಮಾಡಿದರು. ಅವರು ಪಕ್ಷವನ್ನು ತೊರೆಯುವುದಿಲ್ಲ ಎಂದು ನಾನು ಭಾವಿಸುವೆ’ ಎಂದಿದ್ದಾರೆ.

ADVERTISEMENT

‘ಯಾರು ಬೇಕಾದರೂ ಪಕ್ಷ ತೊರೆಯಬಹುದು. ಪಕ್ಷ ಕಟ್ಟುವುದು ಹೇಡಿಗಳು, ಭ್ರಷ್ಟರಲ್ಲದ ಕಾರ್ಯಕರ್ತರು. ತನ್ನ ಮಗ ಚುನಾವಣೆಯಲ್ಲಿ ಗೆಲ್ಲಬೇಕು ಎನ್ನುವ ಕಾರಣಕ್ಕೆ ಪಕ್ಷ ತೊರೆಯಬೇಕು ಎಂದು ಬಯಸುವವರು, ಬಿಡಬಹುದು’ ಎಂದು ರಾವುತ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.