ADVERTISEMENT

ಜಗತ್ತಿನ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್‌ನಲ್ಲಿ 5ಜಿ ಇಂಟರ್‌ನೆಟ್‌ ಸಂಪರ್ಕ!

ಪಿಟಿಐ
Published 13 ಜನವರಿ 2025, 13:25 IST
Last Updated 13 ಜನವರಿ 2025, 13:25 IST
   

ಶ್ರೀನಗರ: ಜಗತ್ತಿನ ಅತಿ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್‌ ಗ್ಲೇಸಿಯರ್‌ ಪ್ರದೇಶದಲ್ಲಿ ನಿಯೋಜನೆಗೊಂಡ ಸೈನಿಕರು ಇನ್ನು 5ಜಿ ಇಂಟರ್‌ನೆಟ್ ಸಂಪರ್ಕವನ್ನು ಪಡೆಯಬಹುದು ಎಂದು ರಿಲಾಯನ್ಸ್‌ ಜಿಯೊ ಟೆಲಿಕಾಮ್‌ ಕಂಪನಿ ಘೋಷಿಸಿದೆ.

ರಿಲಾಯನ್ಸ್‌ ಜಿಯೊ ಕಂಪನಿ ಮತ್ತು ಭಾರತೀಯ ಸೇನೆ ಸಂಯೋಜನೆಯೊಂದಿಗೆ ಸಿಯಾಚಿನ್‌ ಗ್ಲೇಸಿಯರ್‌ ಪ್ರದೇಶದಲ್ಲಿ 4ಜಿ ಮತ್ತು 5ಜಿ ಸಂಪರ್ಕವನ್ನು ವಿಸ್ತರಿಸಲು ಯಶಸ್ವಿಯಾಗಿದೆ. ಜ.15 ರಂದು ಸೇನಾ ದಿನದಂದು 5ಜಿ ಸಂಪರ್ಕಕ್ಕೆ ಚಾಲನೆ ದೊರೆಯಲಿದೆ.

ಸೇನಾ ಸಿಗ್ನಲರ್ಸ್‌ಗಳ ಸಹಾಯದಿಂದ ಕಠಿಣ ಪ್ರದೇಶದಲ್ಲೂ ನೆಟ್‌ವರ್ಕ್‌ ಪೂರೈಸುವಲ್ಲಿ ರಿಲಾಯನ್ಸ್‌ ಜಿಯೊ ಯಶಸ್ವಿಯಾಗಿದೆ ಎಂದು ಟೆಲಿಕಾಮ್‌ ಕಂಪನಿಯ ವಕ್ತಾರರು ಹೇಳಿದ್ದಾರೆ.

ADVERTISEMENT

ರಿಲಯನ್ಸ್ ಜಿಯೊ, ಫಾರ್ವರ್ಡ್‌ ಪೋಸ್ಟ್‌ನಲ್ಲಿ ಪ್ಲಗ್ ಆ್ಯಂಡ್ ಪ್ಲೇ ಸಾಧನ ಬಳಸಿ 5ಜಿ ಸೇವೆ ನೀಡಿದೆ. ಈ ಮೂಲಕ 16 ಸಾವಿರ ಅಡಿ ಎತ್ತರದ ಕರಕೊರಮ್‌ ಪ್ರದೇಶಲ್ಲಿ ಸಂಪರ್ಕ ಸಾಧಿಸಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.