ADVERTISEMENT

ಗುಜರಾತ್‌ನ ವನ್ಯಜೀವಿ ಸಂರಕ್ಷಣಾ ಕೇಂದ್ರ ‘ವಂತಾರ’ಕ್ಕೆ ಕ್ಲೀನ್ ಚಿಟ್ ನೀಡಿದ SIT

ಪಿಟಿಐ
Published 15 ಸೆಪ್ಟೆಂಬರ್ 2025, 9:21 IST
Last Updated 15 ಸೆಪ್ಟೆಂಬರ್ 2025, 9:21 IST
   

ನವದೆಹಲಿ: ಕಾನೂನುಗಳನ್ನು ಪಾಲಿಸದೆಯೇ ಭಾರತ ಮತ್ತು ವಿದೇಶದಿಂದ ಪ್ರಾಣಿಗಳನ್ನು ಪಡೆಯುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ರಚಿಸಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ) ರಿಲಯನ್ಸ್ ಫೌಂಡೇಷನ್‌ನ ವನ್ಯಜೀವಿ ರಕ್ಷಣೆ ಮತ್ತು ಪುನರ್ವಸತಿ ಕೇಂದ್ರ ‘ವಂತಾರ’ಕ್ಕೆ ಕ್ಲೀನ್ ಚಿಟ್ ನೀಡಿದೆ.

ಪ್ರಕರಣ ಸಂಬಂಧ ಎಸ್‌ಐಟಿ ಅಧಿಕಾರಿಗಳು ನ್ಯಾಯಮೂರ್ತಿಗಳಾದ ಪಂಕಜ್‌ ಮಿತ್ತಲ್ ಮತ್ತು ಪಿ.ಬಿ. ವರಾಳೆ ನೇತೃತ್ವದ ಪೀಠಕ್ಕೆ ತನ್ನ ವರದಿಯನ್ನು ಸಲ್ಲಿಸಿದೆ. ‌ಜತೆಗೆ ವಂತಾರದ ನಿಯಮಗಳ ಬಗ್ಗೆ ಎಸ್‌ಐಟಿ ಅಧಿಕಾರಿಗಳು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

ವರದಿಯನ್ನು ಪರಿಶೀಲಿಸಿದ ನಂತರ ವಿವರವಾದ ಆದೇಶವನ್ನು ನೀಡುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.

ADVERTISEMENT

ಮಾಧ್ಯಮ ಮತ್ತು ಸಾಮಾಜಿಕ ಜಾಲಾತಾಣಗಳಲ್ಲಿನ ವರದಿ ಹಾಗೂ ಎನ್‌ಜಿಒಗಳು ಮತ್ತು ವನ್ಯಜೀವಿ ಸಂರಕ್ಷಣಾ ಸಂಸ್ಥೆಗಳು ನೀಡಿನ ದೂರುಗಳ ಆಧಾರದಲ್ಲಿ ಸಲ್ಲಿಕೆಯಾದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿದ ನ್ಯಾಯಾಲಯವು ಆಗಸ್ಟ್ 25ರಂದು ಎಸ್‌ಐಟಿಯನ್ನು ರಚಿಸಿತ್ತು.

ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜೆ. ಚೆಲಮೇಶ್ವರ್‌ ನೇತೃತ್ವದಲ್ಲಿ ನಾಲ್ವರನ್ನೊಳಗೊಂಡ ಎಸ್‌ಐಟಿ ತಂಡವು ಶುಕ್ರವಾರ ತನ್ನ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದೆ.

ಆಗಸ್ಟ್ 14ರಂದು ಕಾಡು ಪ್ರಾಣಿಗಳ ರಕ್ಷಣೆ ಮತ್ತು ಪುನರ್ವಸತಿ ಕೇಂದ್ರವಾದ ವಂತಾರದಲ್ಲಿರುವ ಆನೆಗಳನ್ನು ಹಿಂದಿರುಗಿಸಲು ಮೇಲ್ವಿಚಾರಣಾ ಸಮಿತಿಯನ್ನು ರಚಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್‌, ‘ಸಂಪೂರ್ಣವಾಗಿ ಅಸ್ಪಷ್ಟ’ ಎಂದು ಕರೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.