ಚಂಡೀಗಢ: ಪಂಜಾಬ್‌ನ ಜಲಂಧರ್‌ನಲ್ಲಿ ಸಶಸ್ತ್ರ ಪಡೆಗಳು ಬೇಹುಗಾರಿಕಾ ಡ್ರೋನ್‌ವೊಂದನ್ನು ಹೊಡೆದುರುಳಿಸಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಡರಾತ್ರಿ ತಿಳಿಸಿದ್ದಾರೆ.
ಮಂಡ್ ಗ್ರಾಮದ ಬಳಿ ರಾತ್ರಿ 9:20ರ ಸುಮಾರಿಗೆ ಬೇಹುಗಾರಿಕಾ ಡ್ರೋನ್‌ವೊಂದನ್ನು ಸಶಸ್ತ್ರ ಪಡೆಗಳು ಹೊಡೆದುರುಳಿಸಿದೆ ಎಂದು ನನಗೆ ಮಾಹಿತಿ ಬಂದಿದೆ. ತಜ್ಞರ ತಂಡವು ಅವಶೇಷಗಳನ್ನು ಹುಡುಕುತ್ತಿದೆ ಎಂದು ಜಲಂಧರ್ ಉಪ ಆಯುಕ್ತ ಹಿಮಾಂಶು ಅಗರ್ವಾಲ್ ಹೇಳಿದ್ದಾರೆ.
ಯಾವುದೇ ಡ್ರೋನ್ ಅವಶೇಷ ಕಂಡು ಬಂದರೆ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸುವಂತೆ ಹಾಗೂ ಅದರ ಹತ್ತಿರ ಹೋಗದಮತೆ ಅವರು ಜನರಿಗೆ ಸೂಚನೆ ನೀಡಿದ್ಧಾರೆ.
ರಾತ್ರಿ 10 ಗಂಟೆಯಿಂದ ಯಾವುದೇ ಡ್ರೋನ್ ಹಾರಾಟ ಕಂಡು ಬಂದಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಜಲಂಧರ್‌ನ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಳಿಸಿದ್ದೇವೆ. ಜನರು ಜಾಗರೂಕರಾಗಿರಬೇಕು. ಪಟಾಕಿಗಳನ್ನು ಸಿಡಿಸಬಾರದು. ಭಯ ಹುಟ್ಟಿಸಲು ಯತ್ನಿಸುವವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.